ದುಬೈ ವಿಮಾನ ನಿಲ್ದಾಣದಲ್ಲಿ ಪ್ರವಾಹ, ಭಾರೀ ಮಳೆಯ ನಂತರ ವಿಮಾನಗಳ ಮಾರ್ಗ ಬದಲಾವಣೆ

ನವ ದೆಹಲಿ:ಸಾಮಾನ್ಯವಾಗಿ ಶುಷ್ಕ ಹವಾಮಾನ ಮತ್ತು ಸುಡುವ ತಾಪಮಾನವನ್ನು ಅನುಭವಿಸುವ ದುಬೈ, ಮಂಗಳವಾರ ಭಾರೀ ಮಳೆಯು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯನ್ನು ಅಚ್ಚರಿಗೊಳಿಸಿದೆ.

ಮಳೆಯಿಂದಾಗಿ ವಿಮಾನ ಯಾನಕ್ಕೆ ಆಡಚಣೆಯಾಗಿದ್ದು ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ದೇಶದಾದ್ಯಂತ ವ್ಯಾಪಕವಾದ ಪ್ರವಾಹದ ಸ್ಥಿತಿ ಉದ್ಬವವಾಗಿತ್ತು.

ಅನಿರೀಕ್ಷಿತವಾದ ನೆರೆಯಿಂದಾಗಿ ನಗರ ಸ್ತಬ್ಧಗೊಂಡಿತು. ಹವಮಾನ ಬದಲಾವಣೆಯ ನೇರ ಪರಿಣಾಮ ಇದಾಗಿದೆಯೆಂದು ವಿಶ್ಲೇಷಿಸಲಾಗುತ್ತಿದೆ.

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದ ಅತ್ಯಂತ ಜನನಿಬಿಡ ವಾಯು ಕೇಂದ್ರವಾಗಿದ್ದು, ಭಾರೀ ಮಳೆಯು ವಿಮಾನ ಕಾರ್ಯಾಚರಣೆಯನ್ನು ಅಪಾಯಕಾರಿಯಾಗಿಸಿದ್ದರಿಂದ ಹಲವಾರು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಯಿತು. ಮಂಗಳವಾರ ಸಂಜೆಯ 100 ಕ್ಕೂ ಹೆಚ್ಚು ವಿಮಾನಗಳ ಆಗಮನವನ್ನು ರದ್ದುಗೊಳ್ಳಿಸಲಾಯಿತು. 25 ನಿಮಿಷಗಳ ನಂತರ ಕ್ರಮೇಣ ಪುನರಾರಂಭವಾಯಿತು. ಸಂಜೆ ಹೊರಡುವ ವಿಮಾನಗಳ ಪುನರಾರಂಭದ ಹೊರತಾಗಿಯೂ, ವಿಮಾನ ಕಾರ್ಯಾಚರಣೆಗಳು ವಿಳಂಬ ಮತ್ತು ರದ್ದತಿಯನ್ನು ಎದುರಿಸಿದವು.

Latest Indian news

Popular Stories