ಮಡಿಕೇರಿಯಲ್ಲಿ ತಂಪೆರದ ಮಳೆರಾಯ!

ಮಡಿಕೇರಿ: ಬಿಸಿಲಿನ ತಾಪದಿಂದ ತತ್ತರಿಸಿ ಹೋಗಿದ್ದ ತಾಲೂಕಿನ (Madikeri) ಜನರಿಗೆ ಮಳೆರಾಯ (Rain) ತಂಪೆರೆದಿದ್ದಾನೆ. ಇಲ್ಲಿನ ಮೂರ್ನಾಡು ಹಾಗೂ ಕಿಗ್ಗಲೂ ಗ್ರಾಮದಲ್ಲಿ ಧಿಡೀರ್ ಮಳೆಯಾಗಿದ್ದು ಗ್ರಾಮಗಳ ಸುತ್ತಮುತ್ತ ತಂಪಾದ ವಾತಾವರಣ ಸೃಷ್ಟಿಯಾಗಿದೆ.

ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾದ ಪರಿಣಾಮ ಕೊಡಗಿನ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿತ್ತು. ಅಲ್ಲದೇ ಪ್ರಸ್ತುತ ಜಿಲ್ಲೆಯ ಹಲವೆಡೆಯ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ. ಕಾಡು ಪ್ರಾಣಿಗಳಿಗೂ ನೀರಿಲ್ಲದೇ ನಾಡಿನತ್ತ ಲಗ್ಗೆ ಇಡುತ್ತಿವೆ. ಇಂತಹ ಹೊತ್ತಿನಲ್ಲಿ ಮಳೆಯಾಗಿದ್ದು ಜನ ಸಂಭ್ರಮಿಸಿದ್ದಾರೆ.

ಮಳೆ ಇಲ್ಲದೇ ಕಂಗಾಲಾಗಿದ್ದ ಕಾಫಿ ಬೆಳೆಗಾರರ ಮೋಗದಲ್ಲಿ ಈಗ ಮಂದಹಾಸ ಮೂಡಿದೆ. ಇನ್ನೂ ನಾಪೋಕ್ಲು ಅಯ್ಯಗೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಮೋಡ ಕವಿದಿದ್ದು, ವಾತಾವರಣ ತಂಪಾಗಿದೆ. ಮಳೆಯಿಂದಾಗಿ ವಾಹನ ಸವಾರರು ಕೆಲವೆಡೆ ಪರದಾಡಿದ್ದಾರೆ.

Latest Indian news

Popular Stories