ಬಿಜೆಪಿ 2 ನೇ ಪಟ್ಟಿ: ದಕ್ಷಿಣ ಕನ್ನಡಕ್ಕೆ ಕ್ಯಾ| ಬ್ರಿಜೇಶ್ ಚೌಟಾ, ಉಡುಪಿಗೆ ಕೋಟಾ ಶ್ರೀ ನಿವಾಸ್ ಪೂಜಾರಿ, ಬೆಂಗಳೂರು ಉತ್ತರಕ್ಕೆ ಶೋಭಾ ಕರಂದ್ಲಾಜೆ

ಬೆಂಗಳೂರು: ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕುತೂಹಲ ಕೆರಳಿಸಿತ್ತು.

ದಕ್ಷಿಣ ಕನ್ನಡದಿಂದ ನಳಿನ್ ಕುಮಾರ್ ಕಟೀಲಿಗೆ ಕ್ಷೇತ್ರ ಕೈತಪ್ಪಿದ್ದು, ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಅವಕಾಶ ನೀಡಲಾಗಿದೆ.

ಉಡುಪಿಯಿಂದ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕಣಕ್ಕೆ ಇಳಿಯಲಿದ್ದಾರೆ. ಈ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರದಿಂದ ಟಿಕೇಟ್ ನೀಡಲಾಗಿದೆ.

ಬೆಂಗಳೂರು ಉತ್ತರ ಸಂಸದರಾಗಿದ್ದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೇಟ್ ಕೈತಪ್ಪಿದೆ.

ಮೈಸೂರಿನಿಂದ ಯದುವೀರ್ ಕಣಕ್ಕೆ ಇಳಿಯಲಿದ್ದು, ಪ್ರತಾಪ್ ಸಿಂಹ ಅವರಿಗೆ ಟಿಕೇಟ್ ನೀಡಿಲ್ಲ.

ಯಾರ್ಯಾರಿಗೆ ಟಿಕೆಟ್?
ಚಿಕ್ಕೋಡಿ ಲೋಕಸಭಾ ಕ್ಷೇತ್ರ-ಅಣ್ಣಾ ಸಾಹೇಬ್ ಜೊಲ್ಲೆ
ಬಾಗಲಕೋಟೆ ಲೋಕಸಭಾ ಕ್ಷೇತ್ರ-ಪಿ.ಸಿ.ಗದ್ದಿಗೌಡರ್
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ-ಕೋಟ ಶ್ರೀನಿವಾಸ ಪೂಜಾರಿ
ಹಾವೇರಿ ಲೋಕಸಭಾ ಕ್ಷೇತ್ರ-ಬಸವರಾಜ ಬೊಮ್ಮಾಯಿ
ಮೈಸೂರು ಕ್ಷೇತ್ರ-ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಬೆಂಗಳೂರು ಗ್ರಾಮಾಂತರ ಕ್ಷೇತ್ರ-ಡಾ.ಸಿ.ಎನ್.ಮಂಜುನಾಥ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ-ಶೋಭಾ ಕರಂದ್ಲಾಜೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ-ತೇಜಸ್ವಿ ಸೂರ್ಯ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ-ಪಿ.ಸಿ.ಮೋಹನ್
ತುಮಕೂರು ಲೋಕಸಭಾ ಕ್ಷೇತ್ರ-ವಿ.ಸೋಮಣ್ಣ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ-ಕ್ಯಾಪ್ಟನ್ ಬ್ರಿಜೇಶ್ ಚೌಟಾ
ಚಾಮರಾಜನಗರ ಲೋಕಸಭಾ ಕ್ಷೇತ್ರ-ಎಸ್.ಬಾಲರಾಜು
ಧಾರವಾಡ ಲೋಕಸಭಾ ಕ್ಷೇತ್ರ-ಪ್ರಹ್ಲಾದ್ ಜೋಶಿ
ಕೊಪ್ಪಳ ಲೋಕಸಭಾ ಕ್ಷೇತ್ರ-ಡಾ.ಬಸವರಾಜ ತ್ಯಾವಟೂರು
ದಾವಣಗೆರೆ ಲೋಕಸಭಾ ಕ್ಷೇತ್ರ-ಗಾಯತ್ರಿ ಸಿದ್ದೇಶ್ವರ್
ಬಳ್ಳಾರಿ ಲೋಕಸಭಾ ಕ್ಷೇತ್ರ-ಬಿ.ಶ್ರೀರಾಮುಲು
ಕಲಬುರಗಿ ಲೋಕಸಭಾ ಕ್ಷೇತ್ರ-ಡಾ.ಉಮೇಶ್ ಜಾಧವ್
ಬೀದರ್ ಲೋಕಸಭಾ ಕ್ಷೇತ್ರ-ಭಗವಂತ ಖೂಬಾ
ವಿಜಯಪುರ ಲೋಕಸಭಾ ಕ್ಷೇತ್ರ-ರಮೇಶ್ ಜಿಗಜಿಣಗಿ
ಶಿವಮೊಗ್ಗ ಲೋಕಸಭಾ ಕ್ಷೇತ್ರ-ಬಿ.ವೈ.ರಾಘವೇಂದ್ರ

Latest Indian news

Popular Stories