ತಗ್ಗಿದ ಮಳೆಯ ಆರ್ಭಟ; ಕರಾವಳಿಯಾದ್ಯಂತ ಆಹ್ಲಾದಕರ ವಾತಾವರಣ!

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆಯ ಆರ್ಭಟ ತಗ್ಗಿದ್ದು ಇದೀಗ ಚಳಿಯ ಅನುಭವ ಹೆಚ್ಚಾಗಿದೆ.

ಮಳೆಯ ನೆರೆ ನೀರು ತಗ್ಗಿದ್ದು ಯಥಾ ಸ್ಥಿತಿಗೆ ಬಂದಿದ್ದು ಜಲಾವೃತಗೊಂಡಿದ್ದ ತಗ್ಗು ಪ್ರದೇಶಗಳಲ್ಲಿನ ನೀರು ಇಳಿಕೆಯಾಗಿದೆ. ಇನ್ನು ಕೆಲವೆಡೆ‌ ನೀರು ಹರಿಯಲು ಸರಿಯಾದ ಮಾರ್ಗವಿಲ್ಲದ ಕಾರಣ ಇನ್ನು ಕೂಡ ನೀರು ನಿಂತಿರುವ ದೃಶ್ಯ ಕಂಡು ಬರುತ್ತಿದೆ.

ಬುಧವಾರ ಬೆಳಿಗ್ಗಿನಿಂದ ದಟ್ಟವಾದ ಮೋಡ ಇದ್ದರೂ ಕೂಡ ಸಾಧಾರಣ ಮಳೆಯಾಗುತ್ತಿದ್ದು ಚಳಿಯ ವಾತಾವರಣ ಸೃಷ್ಟಿಯಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಜುಲೈ 11 ವರೆಗೆ ಜಿಲ್ಲೆಯಲ್ಲಿ ಉತ್ತಮ ‌ಮಳೆಯಾಗುವ ಸಾಧ್ಯತೆ ಇದೆ.

Latest Indian news

Popular Stories