ಉಡುಪಿ: ಕಳೆದರು ಎರಡು ಮೂರು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆ ಇಂದು ತಗ್ಗಿದ್ದು ಬಿಸಿಲು ಕಾಣಿಸಿಕೊಂಡಿದೆ.
ಜೂನ್ 26, 27 ರಂದು ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡರೆ, ನದಿ ತೀರಾ ಪ್ರದೇಶಗಳು ನೆರೆ ಭೀತಿ ಎದುರಿಸಿದ್ದವು. ಶುಕ್ರವಾರ ಬೆಳಿಗ್ಗಿನಿಂದ ಮೋಡ ಕವಿದ ವಾತಾವರಣ ಕೊಂಚ ಇದ್ದರೂ ಮಳೆಗೆ ಬ್ರೇಕ್ ಬಿದ್ದು ಬಿಸಿಲು ಕಾಣಿಸಿದೆ.
ತಗ್ಗು ಪ್ರದೇಶಗಳಲ್ಲಿ ನಿಂತಿದ್ದ ನೀರು ಇಂಗಿದ್ದು ಸದ್ಯದ ಮಟ್ಟಿಗೆ ನೆರೆ ಭೀತಿ ದೂರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಕಾರಣ ಇಂದು ಕೂಡ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.