ಉ.ಕ | ಕರಾವಳಿ ಪ್ರದೇಶದಲ್ಲಿ ಅಲ್ಲಲ್ಲಿ ಬಿಡುವು ನೀಡಿ ಸುರಿಯುತ್ತಿರುವ ಮಳೆ

ಕಾರವಾರ: ಕರಾವಳಿಯಲ್ಲಿ ಮಳೆ ಅಲ್ಲಲ್ಲಿ ಬಿಡುವು ನೀಡಿ ಸುರಿಯುತ್ತಿದೆ .‌ಕಾರವಾರ, ದಾಂಡೇಲಿಯಲ್ಲಿ ಸೂರ್ಯನ ದರ್ಶನವಾಗಿದೆ. ಕುಮಟಾದಲ್ಲಿ ಎಡೆಬಿಡದೆ ಬೆಳಗಿನ ಜಾವ ಮಳೆ‌ ಸುರಿಯಿತು.ವಾಲಗಳ್ಳಿ ಅರೋಡಿ ರಸ್ತೆಗಳು ಜಲಾವೃತವಾಗಿದ್ದವು

.

ಕಾರವಾರದ ಚೆಂಡಿಯಾ,ಇಡೂರು ಬಳಿ ಮನೆಗಳಿಗೆ ಮಳೆ ನೀರು ನುಗ್ಗಿದ ಕಾರಣ ಜಲದಿಗ್ಭಂಧನ ಉಂಟಾಗಿತ್ತು. ಮಾಜಾಳಿ ಭಾಗದಲ್ಲಿ ಕಡಲ ಕೊರೆತವಾಗಿದ್ದು , ಶಾಸಕ ಸತೀಶ್ ಸೈಲ್ ಈ ಪ್ರದೇಶಕ್ಕೆ ಭೇಟಿ ನೀಡಿದರು.


ಸುಫಾ ಹಿನ್ನೀರು, ಕೊಡಸಳ್ಳಿ ,ಕದ್ರಾದಲ್ಲಿ ಭಾರೀ ಮಳೆ ಸುರಿದಿದೆ. ಕದ್ರಾ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ಸ ನೀರು ಹರಿದು ಬಂದಿದೆ. 22 ಸಾವಿರ ಕ್ಯೂಸೆಕ್ಸ ನೀರು ಹೊರ ಬಿಡಲಾಗುತ್ತಿದೆ.
ಶಿರಸಿ, ಸಿದ್ದಾಪುರದಲ್ಲಿ ಸಹ ಮಳೆ ಸುರಿಯಿತು. ಜು.9ರ ತನಕ ಮಳೆ ಮುಂದುವರಿಯಲಿದೆ .

ಎಲ್ಲೆಲ್ಲಿ ಎಷ್ಟು ಮಳೆ :
ಕಳೆದ 24 ತಾಸುಗಳಲ್ಲಿ ಭಟ್ಕಳದಲ್ಲಿ ಅತೀ ಹೆಚ್ಚು ಮಳೆ ಶನಿವಾರ ಬೆಳಗಿನ ಜಾವ 8 ರ ಸಮಯಕ್ಕೆ 218 ಮಿಲಿ ಮೀಟರ್ ಮಳೆ ಸುರಿದಿತ್ತು ,ಹೊನ್ನಾವರ 173 , ಕಾರವಾರ 170, ಕುಮಟಾ 115 ಮಿಲಿ ಮೀಟರ್ ಮಳೆ ಸುರಿದಿದೆ. ಕದ್ರಾದಲ್ಲಿ 163 , ಕೊಡಸಳ್ಳಿಯಲ್ಲಿ 123 ಮಿಲಿ ಮೀಟರ್ ಮಳೆ ಸುರಿದಿದೆ. ಕಾಳಿ ನದಿಯು ಕದ್ರಾ ಬಳಿ ತುಂಬಿ ಹರಿಯುತ್ತಿದೆ. 24 ತಾಸು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Zyada

1001379596 Climate and environment, Uttara Kannada

Latest Indian news

Popular Stories