ಹವಾಮಾನ ವರದಿ: 6 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆ!

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ಒಟ್ಟು ಆರು ಜಿಲ್ಲೆಗಳಲ್ಲಿ ಭಾರೀ ಮಳೆ ಬರುವ ಮುನ್ಸೂಚನೆ ಇದೆ. ಈಗಾಗಲೇ ಆವರಿಸಿದ್ದ ಹವಾಮಾನ ವೈಪರಿತ್ಯದ ಪ್ರಭಾವ ಇಳಿಕೆ ಆದ ಪರಿಣಾಮ, ಮಲೆನಾಡು ಮತ್ತು ಕರಾವಳಿ ಭಾಗವು ರೆಡ್ ಅಲರ್ಟ್‌ನಿಂದ ಯೆಲ್ಲೋ ಅಲರ್ಟ್‌ಗೆ ಮರಳಿದೆ.

ಸದ್ಯ ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಆಗಲಿದೆ. ಭಾರೀ ಮಳೆ ಪ್ರಯುಕ್ತ ಈ ಆರು ಜಿಲ್ಲೆಗಳಿಗೆ ನಾಳೆ ಸೋಮವಾರ ಮತ್ತು ಮಂಗಳವಾರ (ಜುಲೈ 2ರವರೆಗೆ) ‘ಹಳದಿ ಎಚ್ಚರಿಕೆ’ ಕೊಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.

Latest Indian news

Popular Stories