ಬೆಂಗಳೂರು ಸೇರಿ ರಾಜ್ಯದಲ್ಲಿ ಈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾರ್ಚ್ 31 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬಿಸಿಲಿನಿಂದ ಬೇಸತ್ತ ಜನಕ್ಕೆ ವರುಣ ತಂಪೆರೆಯಲಿದ್ದಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನೀರಿಕ್ಷೆ ಇದೆ. ಆದ್ರೆ ಅಧಿಕೃತವಾಗಿ IMDಯ ರಿಪೋರ್ಟ್‍ಗೆ ನಾವು ಕಾಯಬೇಕು.ಮಾರ್ಚ್ 28 -29ಕ್ಕೆ IMD ಮುನ್ಸೂಚನೆಯ ರಿಪೋರ್ಟ್ ಬರುತ್ತೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.
ಈಗ ಕೆಲ ಬೇರೆ ಬೇರೆ ಏಜೆನ್ಸಿಗಳ ರಿಪೋರ್ಟ್ ಪ್ರಕಾರ ನಮ್ಮ ರಾಜ್ಯದಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗವು ಸಾಧ್ಯತೆ ಇದೆ. ಮಳೆ ಹೆಚ್ಚಾಗಬಹುದು ಎಂಬ ಮುನ್ಸೂಚನೆ ಬರ್ತಿದೆ. ನೋಡೋಣ ಐಎಂಡಿ ಮುನ್ಸೂಚನೆ ಬಂದ ನಂತರ ನಮಗೆ ಅಧಿಕೃತವಾಗಲಿದೆ ಎಂದಿದ್ದಾರೆ.