ಬೆಂಗಳೂರಿನಲ್ಲಿ ಮತ್ತೊಂದು ಡೆಲ್ಟಾ ಪ್ಲಸ್ ಪ್ರಕರಣ

ಬೆಂಗಳೂರು: ರಾಜ್ಯ ಅನ್‌ಲ್ಲಾಕ್ ಆದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಡೆಲ್ಟಾ ಪ್ಲಸ್ ಕೇಸ್ ಪತ್ತೆಯಾಗಿದೆ.
ನಗರದ ನಂದಿನ ಲೇಔಟ್ ನಿವಾಸಿಯಾಗಿರುವ 60 ವರ್ಷದ ವೃದ್ಧೆಯೊಬ್ಬರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದೆ. ಡೆಲ್ಟಾ ಸೋಂಕಿತೆ ಸುಮಾರು 50ಕ್ಕೂ ಹೆಚ್ಚು ಜನರೊಂದಿಗೆ ಸಂಪರ್ಕದಲ್ಲಿದ್ದು, ಸದ್ಯ ಆರೋಗ್ಯ ಇಲಾಖೆ ಸಿಬ್ಬಂದಿ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು ಮೂರು ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಎರಡು ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿರುವುದು ರಾಜಧಾನಿ ವೈದ್ಯರಿಗೆ ಹೊಸ ಆತಂಕ ಎದುರಾಗಿದೆ.

Latest Indian news

Popular Stories

error: Content is protected !!