ಜುಲೈ.15 ರಂದು ಅನ್‌ಲೈನ್ ಕೌಶಲ್ಯ ತರಬೇತಿಗೆ ಚಾಲನೆ

ಬೀದರ ಜುಲೈ 13 (ಕರ್ನಾಟಕ ವಾರ್ತೆ):- ಆಕಾಂಕ್ಷಾ ಸಿ.ಎಸ್.ಆರ್. ಕಾರ್ಯಕ್ರಮದಡಿಯಲ್ಲಿ APPOLLO MEDSKILLS ಸಂಸ್ಥೆಯಿಂದ ಜುಲೈ.15 ರಂದು ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ 12000 ಅಭ್ಯರ್ಥಿಗಳಿಗೆ ಆರೋಗ್ಯ ವಲಯದಲ್ಲಿ 10 ರಿಂದ 20 ದಿನದ ಆನ್‌ಲೈನ್ ಕೌಶಲ್ಯ ತರಬೇತಿ ನೀಡಲಿದ್ದಾರೆ.
ತರಬೇತಿ ಪಡೆದ ಆಭ್ಯರ್ಥಿಗಳಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶವನ್ನು ಕಲ್ಪಿಸಲಿದ್ದಾರೆ. 10 ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದ ಅಥವಾ ಶಾಲೆ ಬಿಟ್ಟಿರುವ ಮಕ್ಕಳು ಈ ತರಬೇತಿಗೆ ಅರ್ಹರಿರುತ್ತಾರೆ.
ಪ್ರಯುಕ್ತ ಯುವ ಸಂಘಗಳು ಮತ್ತು ರಾಷ್ಟ್ರೀಯ ಸೇವಾ ಸಂಸ್ಥೆಯ ಸ್ವಯಂ ಸೇವಕರುಗಳು ಇಚ್ಛಿಸುವವರು ತಮ್ಮ ವಿವರಗಳನ್ನು Google Sheet URL: http://forms.gle/6yBMYeamKcRpg4fc6 ನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories