ಕೊಡಗಿನಲ್ಲಿ ಕೋವಿಡ್ : ಸಾವಿನ ಸಂಖ್ಯೆ ೯೨ ಕ್ಕೆ ಏರಿಕೆ Covid in Kodagu

ಮಡಿಕೇರಿ ಏ.೨೫ : Covid in Kodagu ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ೮ ಗಂಟೆ ವೇಳೆಗೆ ೨೯೬ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೨೫೬ ಆರ್.ಟಿ.ಪಿ.ಸಿ.ಆರ್ ಮತ್ತು ೪೦ ಪ್ರಕರಣಗಳು ರಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕಂಡು ಬಂದಿದೆ.
ಮಡಿಕೇರಿ ತಾಲೂಕಿನಲ್ಲಿ ೧೧೬, ಸೋಮವಾರಪೇಟೆ ತಾಲೂಕಿನಲ್ಲಿ ೬೮ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ೧೧೨ ಹೊಸ ಕೋವಿಡ್-೧೯ ಪ್ರಕರಣಗಳು ಪತ್ತೆಯಾಗಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೮೪೯೬ ಆಗಿದ್ದು, ೬೬೭೬ ಮಂದಿ ಗುಣಮುಖರಾಗಿದ್ದಾರೆ. ೧೭೨೮ ಸಕ್ರಿಯ ಪ್ರಕರಣಗಳಿದ್ದು, ೯೨ ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ ೩೩೪ ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.

Z DC 1 1 Covid-19, Kodagu


ಕೊರೊನಾ ಸಂಕ್ರಮಣವನ್ನು ನಿಗ್ರಹಿಸುವುದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯದ ಲಾಕ್ ಡೌನ್‌ನಿಂದ ಕೊಡಗು ಜಿಲ್ಲೆಯಾದ್ಯಂತ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡವಾದರೆ, ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿತು.
ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಕೊರೊನಾ ಪ್ರಕರಣಗಳು ಏರುಮುಖವಾಗಿ ಸಾಗಿದ್ದರೆ, ವಾರಾಂತ್ಯದ ಒಂದು ದಿನದ ಲಾಕ್ ಡೌನ್ ಬಳಿಕ ಭಾನುವಾರ ಕೊರೊನಾ ಪ್ರಕರಣUಳ ಸಂಖ್ಯೆ ಒಂದಷ್ಟು ಕುಸಿದಿದೆ. ಸಾಂಕ್ರಾಮಿಕದ ಅಟ್ಟಹಾಸ ಮೇರೆ ಮೀರುತ್ತಿರುವುದನ್ನು ಅರಿತ ಜನತೆ ಲಾಕ್ ಡೌನ್‌ಗೆ ಪೂರ್ಣ ಸಹಕಾರವನ್ನು ನೀಡಿದ ಪರಿಣಾಮ ಜಿಲ್ಲೆ ಸ್ತಬ್ಧಗೊಂಡಿತ್ತು.

Latest Indian news

Popular Stories