ಕೇರಳ: ಮತ್ತೆ ರೂಪಾಂತರಿತ ಕೋರೊನಾ ಪತ್ತೆ

ತಿರುವನಂತಪುರಂ: ಕೇರಳದ 79 ವರ್ಷದ ಮಹಿಳೆಯೋರ್ವರಲ್ಲಿ ರೂಪಾಂತರಿತ ಕೊರೋನಾ ತಳಿ ಜೆಎನ್1 ಪತ್ತೆಯಾಗಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಕೋವಿಡ್ ಲಕ್ಷಣಗಳನ್ನು ಹೊಂದಿದ್ದ ಈ ಮಹಿಳೆಯ ಮಾದರಿಯನ್ನು ಆಟಿಪಿಸಿಆರ್ ತಪಾಸಣೆಗೊಳಪಡಿಸಿದಾಗ ಇದು ಪತ್ತೆಯಾಗಿದೆ. ಮಹಿಳೆ ಈ ಹಿಂದೆ ಕೊರೋನಾ ಬಂದು ಚೇತರಿಸಿಕೊಂಡಿದ್ದರು.

ಈ ನೂತನ ಪ್ರಬೇಧವು 2023ರ ಸೆಪ್ಟಂಬರ್‌ನಲ್ಲಿ ಯುಎಸ್‌ನಲ್ಲಿ ಮೊದಲು ಪತ್ತೆಯಾತ್ತು ಎಂದು ತಿಳಿದು ಬಂದಿದೆ. ಇದು ಬಿಎ.2.86.ನ ತಳಿ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಈ ಮೊದಲು ಅಕ್ಟೋಬರ್ 25ರಂದು ತಮಿಳುನಾಡಿನ ತಿರುಚಿನಾಪ್ಪಳ್ಳಿಯಿಂದ ಸಿಂಗಾಪುರಕ್ಕೆ ತೆರಳಿದ ವ್ಯಕ್ತಿಯಲ್ಲಿ ಈ ರೋಗ ಪತ್ತೆಯಾಗಿತ್ತು. ಇದೀಗ ಕೇರಳದಲ್ಲಿ ಪತ್ತೆಯಾಗುವ ಮೂಲಕ ರೋಗ ವ್ಯಾಪಿಸುವ ಆತಂಕವೂ ಎದುರಾಗಿದೆ.

Latest Indian news

Popular Stories