ಇಯರ್‌ಫೋನ್‌ ಹಾಕೊಂಡು ಸ್ಕೂಟಿ ಚಲಾಯಿಸುವಾಗಲೇ ಮೊಬೈಲ್‌ ಸ್ಫೋಟವಾಗಿ ಮಹಿಳೆ ಸಾವು

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್‌ ಐಟಂಗಳು ಇದ್ದಕಿದ್ದಂತೆ ಬೆಂಕಿಗಾಹುತಿಯಾಗಿರುವ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಇದೀಗ ಇಯರ್‌ಫೋನ್‌ ಹಾಕಿಕೊಂಡು ಸ್ಕೂಟಿ ಚಾಲನೆ ಮಾಡುವಾಗ ಮೊಬೈಲ್‌ ಸ್ಪೋಟಗೊಂಡು ಚಾಲಕಿ ಚಾವನ್ನಪ್ಪಿದ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇಯರ್ ಫೋನ್ ಹಾಕಿಕೊಂಡು ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರದಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಮಹಿಳೆಯ ಮೊಬೈಲ್ ಇದ್ದಕ್ಕಿದ್ದಂತೆ ಸ್ಫೋಟವಾಗಿದೆ. ಈ ಸ್ಫೋಟ ಸಂಭವಿಸಿದ ತಕ್ಷಣ ಮಹಿಳೆಯು ಸ್ಕೂಟಿಯ ನಿಯಂತ್ರಣವನ್ನು ಕಳೆದುಕೊಂಡಿದ್ದು, ಸ್ಕೂಟರ್ ರಸ್ತೆಯ ಮಧ್ಯದಲ್ಲಿನ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಹಿನ್ನೆಲೆ: ಫರೂಕಾಬಾದ್ ಜಿಲ್ಲೆಯ ನಹ್ರೈಯಾ ಗ್ರಾಮದ ನಿವಾಸಿ ಪೂಜಾ (28) ಬುಧವಾರ ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಸ್ಕೂಟಿಯಲ್ಲಿ ಕಾನ್ಪುರಕ್ಕೆ ತೆರಳುತ್ತಿದ್ದರು. ಅವರು ಕಾನ್ಪುರ ಸೆಂಟ್ರಲ್ ನಿಲ್ದಾಣದಿಂದ ಮುಂಬೈಗೆ ರೈಲು ಹತ್ತಬೇಕಿತ್ತು.

Latest Indian news

Popular Stories