ರಾತ್ರೋರಾತ್ರಿ ಅಂಬಾನಿ, ಅಡಾನಿ ಬಯ್ಯೋದು ನಿಲ್ಲಿಸಿದ್ರಿ; ಎಷ್ಟು ಕಪ್ಪುಹಣ ತಗೊಂಡ್ರಿ?: ರಾಹುಲ್ ಗಾಂಧಿಗೆ ಮೋದಿ ಪ್ರಶ್ನೆ | ಅದಾನಿ – ಅಂಬಾನಿ ಜೊತೆ ಮುನಿಸಿಕೊಂಡಿದ್ದರಾ ಮೋದಿ?

ಕಳೆದ ಐದು ವರ್ಷದಿಂದ ರಾಹುಲ್ ಗಾಂಧಿ ಅವರದ್ದು ಐವರು ಉದ್ಯಮಿಗಳು ಎಂದು ಜಪ ಮಾಡುತ್ತಿದ್ದರು. ಬಳಿಕ ಅಂಬಾನಿ ಅಡಾನಿ ಅಂತ ಹೇಳೋಕೆ ಶುರು ಮಾಡಿದ್ರು. ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಅಂಬಾನಿ ಅಡಾಣಿಯನ್ನು ಬಯ್ಯೋದನ್ನು ನಿಲ್ಲಿಸಿಬಿಟ್ರಲ್ಲ ಯಾಕೆ? ಅವರಿಂದ ಟೆಂಪೋ ತುಂಬ ಕಪ್ಪು ಹಣ ಪಡೆದುಕೊಂಡಿದ್ದಾರಾ? ಎಂದು ರಾಹುಲ್ ಗಾಂಧಿ ಅವರನ್ನು ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ. ತೆಲಂಗಾಣದಲ್ಲಿ ಚುನಾವಣಾ ಭಾಷಣದ ವೇಳೆ ರಾಹುಲ್ ಗಾಂಧಿ ವಿರುದ್ಧ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣದ ರಾಜನ್ನ ಸಿರಿಸಿಲ್ಲ (Rajanna Circilla) ಜಿಲ್ಲೆಯ ವೇಮುಲವಾಡ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಅಂಬಾನಿ, ಅಡಾನಿ ಜಪ ಮಾಡುವುದನ್ನು ರಾಹುಲ್ ಗಾಂಧಿ ನಿಲ್ಲಿಸಿದ್ದು ಯಾಕೆ ಎಂದು ಕೇಳಿದ್ದಾರೆ.

ಇದೀಗ ಅದಾನಿಯ ಅಂಬಾನಿಯ ಆಪ್ತ ಮಿತ್ರ ನರೇಂದ್ರ ಮೋದಿಯವರು‌ ಇದೀಗ ಅವರೊಂದಿಗೆ ಮುನಿಸಿಕೊಂಡಿರುವುದು ಈ ಹೇಳಿಕೆಗೆ ಕಾರಣವೇ ಎಂಬ ಚರ್ಚೆ ಮುನ್ನಲೆಗೆ ಬಂದಿದೆ.

Latest Indian news

Popular Stories