ಕಾಂಗ್ರೆಸ್ ಕ್ರಿಕೆಟ್ ತಂಡದಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲಿದೆ ಎಂದ ಪ್ರಧಾನಿ ಮೋದಿ | ಸೋಲಿನ ಭಯದಿಂದ ದ್ವೇಷ ಭಾಷಣ ಅನಿವಾರ್ಯವಾಗುತ್ತಿದೆಯೇ?

ನರೇಂದ್ರ ಮೋದಿ ಏಕಾಏಕಿ ಚುನಾವಣಾ ಭಾಷಣದಲ್ಲಿ ಅಲ್ಪಸಂಖ್ಯಾತ ವಿರೋಧಿ ಭಾಷಣ ಮಾಡುತ್ತಿದ್ದು ಸೋಲಿನ ಭೀತಿ ಎದುರಿಸುತ್ತಿದ್ದಾರೆಯೇ ಎಂಬ ಚರ್ಚೆ ಇದೀಗ ನಡೆಯುತ್ತಿದೆ.

ಅಭಿವೃದ್ಧಿ, ಇನ್ನಿತರ ಚುನಾವಣಾ ಅಜೆಂಡಾ ಬಿಟ್ಟು “ಸಬ್ಕಾ ಸಾಥ್ ಸಬ್ಕಾ ವಿಕಾಸ್” ಮಂತ್ರ ಪಠಿಸುತ್ತಿದ್ದ‌ ಮೋದಿ ಕೂಡ ಮೇಲಿಂದ ಮೇಲೆ ದ್ವೇಷ ಭಾಷಣ ಮಾಡುತ್ತಿದ್ಧಾರೆ.

ಧರ್ಮದ ಆಧಾರದ ಮೇಲೆ ಕ್ರೀಡೆಗಳಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲು ಕಾಂಗ್ರೆಸ್ ಪಕ್ಷ ಉದ್ದೇಶಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ; ಕ್ರಿಕೆಟ್ ತಂಡದಲ್ಲಿ ಯಾರು ಉಳಿಯುತ್ತಾರೆ ಮತ್ತು ಯಾರು ಉಳಿಯುವುದಿಲ್ಲ ಎಂಬುದನ್ನು ಇದು ನಿರ್ಧರಿಸುತ್ತದೆ ಎಂದು ಹೇಳಿ ಮತ್ತೆ ತನ್ನ ಹುದ್ದೆಯ ಘನತೆಗೆ ಕುಂದು ತರುವ ಮಾತು ಹೇಳಿದ್ದಾರೆ.

ಮಧ್ಯಪ್ರದೇಶದ ಧಾರ್‌ನಲ್ಲಿ ಲೋಕಸಭೆ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

“ಕಾಂಗ್ರೆಸ್ ಪಕ್ಷದ ಉದ್ದೇಶವು ಅಲ್ಪಸಂಖ್ಯಾತರಿಗೆ ಕ್ರೀಡೆಯಲ್ಲಿ ಆದ್ಯತೆ ನೀಡುವುದು. ಇದರರ್ಥ, ಧರ್ಮದ ಆಧಾರದ ಮೇಲೆ ಕ್ರಿಕೆಟ್ ತಂಡದಲ್ಲಿ ಯಾರು ಉಳಿಯುತ್ತಾರೆ ಮತ್ತು ಯಾರು ಇರಬಾರದು ಎಂಬುದನ್ನು ಕಾಂಗ್ರೆಸ್ ನಿರ್ಧರಿಸುತ್ತದೆ” ಎಂದು ಮೋದಿ ಹೇಳಿದ್ದಾರೆ.

Latest Indian news

Popular Stories