ಖುಷಿಯಾಗಿರುತ್ತಿದ್ದ ಮಹಿಳೆಯರನ್ನು ಕೊಲ್ಲಲು ಯತ್ನಿಸಿದ ಆಗಂತುಕ; ಹತ್ತು ಜನರ ಮೇಲೆ ಚೂರಿ ಇರಿತ

ಟೋಕಿಯೋ: ಅತ್ಯಂತ ಭೀಕರ ಘಟನೆಯೊಂದರಲ್ಲಿ ಆಗಂತುಕನೊಬ್ಬ ಖುಷಿಯಾಗಿರುತ್ತಿದ್ದ ಮಹಿಳೆಯರನ್ನು ಕೊಲ್ಲಲು ಪ್ರಯತ್ನಿಸಿದ್ದು ಆ ಹಿನ್ನಲೆಯಲ್ಲಿ ಹತ್ತು ಮಂದಿಯ ಮೇಲೆ ಚೂರಿಯಿಂದ ಇರಿದಿದ್ದಾನೆ.

36 ವರ್ಷದ ವ್ಯಕ್ತಿಯನ್ನು ಟೋಕಿಯೋ ಪೊಲೀಸರು ರೈಲೊಂದರಲ್ಲಿ ಕೃತ್ಯವೆಸಗುತ್ತಿದ್ದಾಗ ಬಂಧಿಸಿದ್ದಾರೆ. ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಈ ಕೃತ್ಯದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಉಳಿದಂತೆ ಒಂಭತ್ತು ಮಂದಿ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

“ನನಗೆ ಮಹಿಳೆಯರು ಖುಷಿಯಾಗಿರುವುದನ್ನು ಕಂಡಾಗ ಕೊಲ್ಲಲು ಮನಸ್ಸಾಗುತ್ತಿತ್ತು” ಎಂದು ಆರೋಪಿ ಹೇಳಿಕೊಂಡಿದ್ದಾನೆ.

2008 ರಲ್ಲೂ ಜಪಾನಿನಲ್ಲಿ ಇಂತಹ ಘಟನೆಯೊಂದು ನಡೆದು ಚೂರಿ ಇರಿತದಿಂದಾಗಿ ಎಂಟು ಮಂದಿ ಮೃತಪಟ್ಟಿದ್ದರು.

Latest Indian news

Popular Stories