ಡಿಕೆಶಿ ಆರೇಳು ಮಂದಿಯನ್ನು ಇಟ್ಟುಕೊಂಡಿದ್ದಾರೆ: ಹೆಚ್‌ಡಿಕೆ

ರಾಯಚೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಅವರು, ಆರೇಳು ಮಂದಿಯನ್ನು ಇಟ್ಟುಕೊಂಡಿದ್ದಾರೆ ಅದು ಹೊರಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್‌ ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ನಾನು ಸ್ಟ್ರೀಟ್ ಫೈಟರ್ ಎಂದು ಹೇಳಿಕೊಳ್ಳುತ್ತಾರೆ.

ಆದರೆ ಅವರು ಹೋಟೆಲಿನಲ್ಲಿ ಆರೇಳು ಮಂದಿಯನ್ನು ಇಟ್ಟುಕೊಂಡಿದ್ದು, ಅದೂ ಹೊರ ಬರಲಿದೆ ಎಂದು ಆರೋಪಿಸಿದರು.

ನಾನೇ ಪ್ರಜ್ವಲ್‌ ರೇವಣ್ಣ ಅವರ ವಿಡಿಯೋವನ್ನು ಹೊರಗಡೆ ರಿಲೀಸ್‌ ಮಾಡಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ವಿಡಿಯೋ ಬಿಡುಗಡೆ ಮಾಡಲು ನನಗೆ ಏನು ಹುಚ್ಚು ಹಿಡಿದಿದ್ಯಾ? ಟೆಂಟ್‌ನಲ್ಲಿ ಬ್ಲೂ ಫಿಲಂ ಬಿಡುಗಡೆ ಮಾಡುವವರು ಇದನ್ನು ಮಾಡಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ತಂದೆ, ತಾಯಿಗೆ ಆತ್ಮ ಸ್ಥೈರ್ಯ ತುಂಬಲು ನಾನು ಎರಡು ದಿನ ಬೆಂಗಳೂರಿನಲ್ಲಿದ್ದೆ. ಅಲ್ಲಿ ಕ್ಯಾಮೆರಾಗಳಿದ್ದವು ವಿಡಿಯೋಗಳನ್ನ ತರಿಸಿಕೊಂಡು ನೋಡಿ. ನನ್ನ ತಂದೆ, ತಾಯಿ ಜೀವಕ್ಕೆ ಅಪಾಯ ಆಗಬಾರದು. ಅವರು ಯಾವ ರೀತಿ ಬದುಕಿದ್ದಾರೆ ಅಂತ ನೀವು ಮರೆತಿರಬಹುದು. ಸಿದ್ದರಾಮಯ್ಯನವರೇ (Siddaramaiah) ನೀವು ದಿನ ಇಷ್ಟಬಂದಂತೆ ಹೇಳಿಕೆ ನೀಡುತ್ತಿದ್ದೀರಿ. ಇಷ್ಟು ದಿನ ಎಸ್‌ಐಟಿ (SIT) ರಚನೆ ಮಾಡಿದ್ದಿರಲ್ಲಾ ಯಾವುದರಲ್ಲಿ ಶಿಕ್ಷೆಯಾಗಿದೆ ಎಂದು ಪ್ರಶ್ನಿಸಿದರು.

Latest Indian news

Popular Stories