CrimeUdupi

ಬಿಜೆಪಿ ಮುಖಂಡ ಯಶ್ಫಾಲ್ ಸುವರ್ಣ ಅವರ ಅಂಗ ರಕ್ಷಕನ ಬೈಕ್ ಅಪಘಾತ – ಆಸ್ಪತ್ರೆಗೆ ದಾಖಲು

ಉಡುಪಿ: ಬೈಕ್ ಅಪಘಾತದಿಂದಾಗಿ ಬಿಜೆಪಿ ಮುಖಂಡ ಯಶ್ಫಾಲ್ ಸುವರ್ಣ ಅವರ ಅಂಗ ರಕ್ಷಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಂಗ ರಕ್ಷಕ ಗಣೇಶ್ KA-20 X-682 ನೇ ಮೊಟಾರ್ ಸೈಕಲಿನಲ್ಲಿ ಅಜ್ಜರಕಾಡುನಲ್ಲಿರುವ ಯಶಪಾಲ್ ಸುವರ್ಣ ರವರ ಮನೆಗೆ ಕರಾವಳಿ ಬೈಪಾಸ್ ಸರ್ವಿಸ್ ರಸ್ತೆಯಲ್ಲಿ ಅಜ್ಜರಕಾಡಿಗೆ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ.

ಅಂಬಲಪಾಡಿ ಅಭಿನಂದನ್ ಪೆಟ್ರೋಲ್ ಬಂಕ್ ಬಳಿ ರಾ.ಹೆ 66 ಸಾರ್ವಜನಿಕ ರಸ್ತೆಯ ಸರ್ವಿಸ್ ರಸ್ತೆಯನ್ನು ಸೇರುವ ಸ್ಥಳದಲ್ಲಿ ಅಪಘಾತ ವರದಿಯಾಗಿದೆ.

ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡ ಕೈಯ ಮೊಣಗಂಟಿನ ಕೆಳಗಡೆ ಮೂಳೆ ಮುರಿತ ಆಗಿರುತ್ತದೆ ಹಾಗೂ ಬಲ ಕಾಲಿನ ಪಾದದ ಮೇಲೆ ತರಚಿದ ರಕ್ತ ಗಾಯವಾಗಿದ್ದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 85/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button