
Crime
ಪಾಣೆಮಂಗಳೂರು :ರೈಲ್ವೆ ಸೇತುವೆ ರಾಡ್ ಗೆ ವಾಹನ ಡಿಕ್ಕಿ
ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ಬಿರುಕು ಕಂಡ ಹಿನ್ನೆಲೆಯಲ್ಲಿ ವಾಹನಗಳು ಸಂಚಾರ ನಿಷೇಧ ಹೇರಿ ಇಲಾಖೆ ಹಾಕಲಾಗಿದ್ದ ಕಬ್ಬಿಣದ ತಡೆಗೆ ವಾಹನವೊಂದು ಡಿಕ್ಕಿ ಹೊಡೆದಿದೆ.
ಶತಮಾನದ ಉಕ್ಕಿನ ಸೇತುವೆಯಾಗಿರುವ ಪಾಣೆಮಂಗಳೂರು ಬ್ರಿಡ್ಜ್ ನ ಮಧ್ಯ ಭಾಗದಲ್ಲಿ ಸಣ್ಣದಾದ ಬಿರುಕು ಕಂಡ ಕಾರಣಕ್ಕಾಗಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕಬ್ಬಿಣದ ರಾಡ್ ಹಾಕಲಾಗಿತ್ತು.ಅದೃಷ್ಟವಶಾತ್ ರಾಡ್ ಬೀಳುವ ವೇಳೆ ಹಿಂಬದಿಯಿಂದ ವಾಹನವಿಲ್ಲದ ಕಾರಣಕ್ಕಾಗಿ ಯಾವುದೇ ಪ್ರಾಣಹಾನಿ ನಡೆದಿಲ್ಲ. ಕಾಮಗಾರಿ ನಡೆಸಿದವರು ಸರಿಯಾಗಿ ರಾಡನ್ನು ಅಳವಡಿಸಿಲ್ಲ ಎನ್ನಲಾಗಿದೆ.
ಅವೈಜ್ಞಾನಿಕ ವಿಧಾನದಿಂದ ಮಾಡಿರುವ ಕಾಮಗಾರಿ ಜೀವಕ್ಕೆ ಅಪಾಯವಾಗುವ ಸಂಭವಿದೆ. ವಾಹನದ ಮೇಲ್ಬಾಗ ಡಿಕ್ಕಿಯಾದ ಪರಿಣಾಮ ರಾಡ್ ಕೆಳಗುರುಳಿದೆ. ಬಳಿಕ ಕೆಲಹೊತ್ತು ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯರು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಬಳಿಕ ಮತ್ತೆ ರಾಡನ್ನು ಮೇಲಕ್ಕೆ ಸಿಕ್ಕಿಸಿದ್ದಾರೆ.




