Crime

ಸ್ವಿಫ್ಟ್ ಕಾರ್ ಅಪಘಾತ ಮೂವರ ಮೃತ್ಯು

ಕೊಪ್ಪಳ (ಕುಷ್ಟಗಿ):- ಲಾರಿಯ (ಕಂಟೈನರ್) ಹಿಂಭಾಗಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ 3 ಜನ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ವಣಗೇರಿ ಬಳಿ ನಡೆದಿದೆ.


ವಿಜಯಪುರದ ಸ್ವಿಫ್ಟ್ ಕಾರ್ ಚಾಲಕನು ಅತೀ ವೇಗವಾಗಿ ಕಾರು ಚಲಾಯಿಸುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು ಕಾರಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದರೇ, ಕಾರು ಚಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

ಮೃತರನ್ನು ಕಾರು ಚಾಲಕ ಪ್ರವೀಣ್ ಕುಮಾರ ಚೌಹಾಣ (27), ಸುರೇಶ ಹಂಡೇವಜೀರ (43), ಗೌರಮ್ಮ ಹಂಡೇವಜೀರ (60) ಎಂದು ಗುರುತಿಸಲಾಗಿದ್ದು, ಮೃತ ರನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button