
CrimeFeatured Story
ಭೀಕರ ಘಟನೆ: ರಸ್ತೆ ಬದಿಯ ಗುಡಿಸಲುಗಳ ಮೇಲೆರಗಿದ ಟ್ರಕ್: ಎಂಟು ಮಂದಿ ಮೃತ್ಯು
ಸೂರತ್: ಅಮ್ರೆಲಿ ಜಿಲ್ಲೆಯಲ್ಲಿ ರಸ್ತೆ ಪಕ್ಕದಲ್ಲಿದ್ದ ಗುಡಿಸಲುಗಳ ಮೇಲೆ ಟ್ರಕ್ ಹರಿದ ಪರಿಣಾಮ ಮಲಗಿದ್ದ ಎಂಟು ಮಂದಿ ಅಮಾನುಷವಾಗಿ ಮೃತಪಟ್ಟಿದ್ದಾರೆ.
ಸಾವರ್ಕುಂಡ್ಲ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಜಾನೆ ಮೂರು ಗಂಟೆಗೆ ಮೃತ್ಯು ಅಮಾಯಕ ಜೀವಗಳ ಕದ ತಟ್ಟಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಬಂದು ಪರಿಶೀಲನೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.
ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. ಗುಜರಾತ್ ಮುಖ್ಯಮಂತ್ರಿ ಮೃತರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ಪರಿಹಾರ ಘೋಷಿಸಿದ್ದಾರೆ. ಜಿಲ್ಲಾಧಿಕಾರಿಗೆ ತನಿಖೆಗೆ ಸೂಚನೆ ನೀಡಿದ್ದಾರೆ.




