ಕಲ್ಬುರ್ಗಿ: ಹಾಡಹಾಗಲೇ ವಕೀಲನ ಹತ್ಯೆ – ಜಾಮೀನು ವಿವಾದ ಶಂಕೆ

ಕಲಬುರಗಿ: ನಗರದ ಸಾಯಿ ಮಂದಿರ ಬಳಿಯಿರುವ ಗಂಗಾ ಅಪಾರ್ಟ್ಮೆಂಟ್ ಬಳಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವಕೀಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಹತ್ಯೆಯಾದ ವಕೀಲನನ್ನು ಈರಣ್ಣಗೌಡ ಪಾಟೀಲ್ (40) ಎಂದು ಗುರುತಿಸಲಾಗಿದೆ.

ಜಮೀನು ವಿವಾದ ಸಂಬಂಧಿಸಿದಂತೆ ಸಂಬಧಿಕರಿಂದಲೇ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ವಿವಿ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ.

Latest Indian news

Popular Stories