
Crime
ಅಫಘಾನ್ ರಕ್ಷಣಾ ಸಚಿವರ ಹತ್ಯೆ ಯತ್ನದ ನಂತರ ಮತ್ತಷ್ಟು ದಾಳಿ ಬಿಗಿಗೊಳಿಸುವ ಎಚ್ಚರಿಕೆ ನೀಡಿದ ತಾಲಿಬಾನ್
ಕಾಬೂಲ್: ತಾಲಿಬಾನ್ ಇದೀಗ ಅಫಘಾನಿಸ್ತಾನದಲ್ಲಿ ತನ್ನ ನಿಯಂತ್ರಣವನ್ನು ಸಾಧಿಸಲು ಯತ್ನಿಸುತ್ತಿದ್ದು ಅಫಘಾನ್ ರಕ್ಷಣಾ ಸಚಿವ ನಿವಾಸದ ಮೇಲೆ ದಾಳಿ ಮಾಡಿ ಹತ್ಯೆಗೆ ಯತ್ನಿಸಿತ್ತು.
ಇದೀಗ ಅಫಘಾನ್ ಸರಕಾರದ ನಾಯಕರನ್ನು ಗುರಿಯಾಗಿಸಿ ಮತ್ತಷ್ಟು ದಾಳಿ ನಡೆಸುವುದಾಗಿ ತಾಲಿಬಾನ್ ಹೇಳಿಕೊಂಡಿರುವ ಕುರಿತು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಕ್ಷಣಾ ಸಚಿವ ಬಿಸ್ಮಿಲ್ಲಾ ಮೊಹಮ್ಮದಿ ಅವರ ನಿವಾಸದ ಮೇಲೆ ಬಾಂಬ್ ಮತ್ತು ಗನ್ ದಾಳಿಯನ್ನು ತಾಲಿಬಾನ್ ನಡೆಸಿತ್ತು.
ಅಫಘಾನ್ ಸೇನೆ ಮತ್ತು ಅಮೇರಿಕಾದ ಸೇನೆ ಏರ್ ಸ್ಟ್ರೈಕ್ ನಡೆಸಿದ್ದಕ್ಕಾಗಿ ಕೌಂಟರ್ ದಾಳಿ ನಡೆಸಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ ಎಂದು ವರದಿಯಾಗಿದೆ. ಅಫಘಾನ್ ಸೇನೆ ಇದೀಗ ತಾಲಿಬಾನಿಗಳ ವಿರುದ್ಧ ಕಾರ್ಯಚರಣೆ ಆರಂಭಿಸಿದ್ದು ಆರು ತಿಂಗಳಲ್ಲಿ ತಾಲಿಬಾನ್ ನನ್ನು ನಿಯಂತ್ರಣಕ್ಕೆ ತರುವುದಾಗಿ ಅಫಘಾನ್ ಸರಕಾರ ಹೇಳಿಕೊಂಡಿದೆ.




