
Crime
ಅಫ್ಘಾನಿಸ್ತಾನ್ | ಹೆರಾತ್ ನಗರದ ವಾಯುವ್ಯದಲ್ಲಿ 6.3 ತೀವ್ರತೆಯ ಭೂಕಂಪ, 1,000 ಕ್ಕೂ ಹೆಚ್ಚು ಜನರು ಮೃತ್ಯು
ಕಾಬೂಲು: ಅಫ್ಘಾನಿಸ್ತಾನದ ಪಶ್ಚಿಮ ಭಾಗದಲ್ಲಿ ಭಾನುವಾರ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇಡೀ ಗ್ರಾಮಗಳು ನೆಲಸಮವಾಗಿದ್ದು, 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಪಶ್ಚಿಮ ಪ್ರಾಂತ್ಯದ ರಾಜಧಾನಿ ಹೆರಾತ್ ನಗರದಿಂದ 33 ಕಿಲೋಮೀಟರ್ (20 ಮೈಲಿ) ದೂರದಲ್ಲಿ 0336 ಜಿಎಂಟಿಯಲ್ಲಿ ಭೂಕಂಪ ಸಂಭವಿಸಿದೆ.ಭೂಕಂಪದಲ್ಲಿ ಸಾವನ್ನಪ್ಪಿದವರಲ್ಲಿ ಶೇಕಡಾ 90 ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಎಂದು ಯುನಿಸೆಫ್ ಬುಧವಾರ ತಿಳಿಸಿದೆ.ಭೂಕಂಪದಿಂದ 12,000 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.




