
ಅನಾಮಧೇಯ ಶವ ಪತ್ತೆ: ಪ್ರಕರಣ ದಾಖಲು
ಹೊಸಪೇಟೆ (ವಿಜಯನಗರ),ಜು.05(ಕರ್ನಾಟಕ ವಾರ್ತೆ): ಹೊಸಪೇಟೆ ನಗರದ ರೈಲ್ವೆ ಸ್ಟೇಷನ್ ರಸ್ತೆಯ ಪಂಚಮುಖಿ ಆಂಜನೇಯ ದೇವಸ್ಥಾನದ ಎದುರುಗಡೆಯ ಪುಟ್ಪಾತ್ನಲ್ಲಿ ಸುಮಾರು 55ರಿಂದ60 ವರ್ಷದ ಅನಾಮಧೇಯ ಶವ ಪತ್ತೆಯಾಗಿರುವ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಾಮಧೇಯ ವ್ಯಕ್ತಿಯ ಚಹರೆ ಗುರುತು : 5.2 ಅಡಿ ಎತ್ತರ, ಕಪ್ಪು ಮೈಬಣ್ಣ, ತೆಳುವಾದ ಮೈಕಟ್ಟು, ಬಿಳಿ ತಲೆ ಕೂದಲು, 2ಇಂಚಿನ ಬಿಳಿ ಗಡ್ಡ ಹಾಗೂ ಮೀಸೆ ಬಿಟ್ಟಿರುತ್ತಾರೆ. ಮಾಸಿದ ಬಿಳಿ ಗೀರುಗಳಿರುವ ನೀಲಿ ಬಣ್ಣದ ಅರ್ಧ ತೋಳಿನ ಅಂಗಿ, ಮಾಸಿದ ಕಪ್ಪು ಬಣ್ಣದ ಕಾಟನ್ ಪ್ಯಾಂಟ್ ಧರಿಸಿರುತ್ತಾರೆ.
ವ್ಯಕ್ತಿಯ ಸಂಬಂಧಿಕರ ಬಗ್ಗೆ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 100ಕ್ಕೆ ಅಥವಾ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ದೂ.ಸಂ:08394-224033/ 9480803070, ಹೊಸಪೇಟೆಯ ಡಿ.ಎಸ್.ಪಿ. ದೂ.ಸಂ: 08394-224204, ಬಳ್ಳಾರಿಯ ಎಸ್.ಪಿ ದೂ.ಸಂ: 08392-258100 ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.




