ವಿಜಯಪುರ: ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 459251 ಗೃಹಬಳಕೆ ಸ್ಥಾವರಗಳಿದ್ದು, ಡಿಸೆಂಬರ್-2023ರ ಅಂತ್ಯಕ್ಕೆ 416891 ಗ್ರಾಹಕರು ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ 408425 ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯ ಪಡೆದಿದ್ದು, ಪ್ರತಿಶತ 98ರಷ್ಟು ಫಲಾನುಭವಿಗಳು ಒಟ್ಟು 15.96 ಮಿಲಿಯನ್ ಯೂನಿಟ್ ಬಳಕೆ ಮಾಡಿದ್ದು, ಇದರಿಂದ ಇಲಾಖೆಗೆ 15.82 ಕೋಟಿ ರೂ. ಅನುದಾನ ಲಭ್ಯವಾಗಿದೆ ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ ಅವರು ತಿಳಿಸಿದ್ದಾರೆ.
ಗೃಹಜ್ಯೋತಿ ಯೋಜನೆಯಡಿ ನೊಂದಾಯಿಸಲು ಯಾವುದೇ ಕಾಲಮಿತಿ ಇರುವುದಿಲ್ಲ. ಇನ್ನೂ ಬಾಕಿ ಉಳಿದ 33959 ಗ್ರಾಹಕರು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಉಪ ವಿಭಾಗ ಕಚೇರಿ (ಸೌಜನ್ಯ ಕೌಂಟರ್), ಗ್ರಾಮ ಒನ್ ಕೇಂದ್ರಗಳು, ಕರ್ನಾಟಕ ಒನ್ ಕೇಂದ್ರ, ಸೈಬರ್ ಕೇಂದ್ರಗಳು, ಸೇವಾ ಸಿಂಧೂ ಪೋರ್ಟಲ್ನಲ್ಲಿ ಮತ್ತು ಮೊಬೈಲ್ ಮೂಲಕ
https://sevasindhugs.karnataka.gov.in ಮೂಲಕ ಆಧಾರ ಕಾರ್ಡ, ವಿದ್ಯುತ್ ಬಿಲ್ ಹಾಗೂ ಆಧಾರ ಲಿಂಕ್ಇರುವ ಮೊಬೈಲ್ನೊಂದಿಗೆ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.