ವಿಜಯಪುರ: ನೀತಿ ಆಯೋಗದಡಿ ಜಿಲ್ಲೆಯ ತಾಳಿಕೋಟೆ ತಾಲೂಕನ್ನು ಮಹತ್ವಾಕಾಂಕ್ಷಿ ತಾಲೂಕು ಎಂದು ಆಯ್ಕೆಮಾಡಲಾಗಿದ್ದು, ಸದರಿ ಬ್ಲಾಕ್ ಮಟ್ಟದಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಬಿಪಿ ಸಂಯೋಜಕರ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿ ಕರ್ತವ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತಾಲೂಕಾ ಮಟ್ಟದಲ್ಲಿ ಸಂಬಂಧಿಸಿದ ಇಲಾಖಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪ್ರತಿನಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಕಾರ್ಯಕ್ರಮದ ವರದಿ ಮತ್ತು ಸಾಧಿಸಿದ ಪ್ರಗತಿಯ ವರದಿಯನ್ನು ಜಿಲ್ಲೆ ಮತ್ತು ನೀತಿ ಆಯೋಗಕ್ಕೆ ಸಲ್ಲಿಸಲು ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು,
ಆಸಕ್ತಿಯಳ್ಳವರು http:/vijayapur.nic.in ಮೂಲಕ ದಿನಾಂಕ : 24-01-2024ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 08352-276936 ಅಥವಾ 9663017184ಕ್ಕೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೈಟೆಕ್ ಶುಗರ್ಕೇನ್ ಹಾರ್ವೇಸ್ಟರ್ ಹಬ್ ಅನುಷ್ಠಾನಕ್ಕೆ ಅರ್ಜಿ ಆಹ್ವಾನ
ವಿಜಯಪುರ: 2023-24ನೇ ಸಾಲಿನ ರಾಜ್ಯ ವಲಯ ಚಾಲ್ತಿ ಯೋಜನೆಯಡಿ ಕೃಷಿ ಪರಿಕರ ಮತ್ತು ಗುಣಮಟ್ಟ ನಿಯಂತ್ರಣ ಯೋಜನೆಯಡಿ ಸಹಾಯಧನದ ಮೇಲೆ ಹೈಟೆಕ್ ಹಾರ್ವೆಸ್ಟ್ ಹಬ್ ಅನುಷ್ಠಾನಕ್ಕೆ ಅರ್ಜಿಯನ್ನು ಕರೆಯಲಾಗಿದೆ.
ಅರ್ಜಿ ಸಲ್ಲಿಸಲು ದಿನಾಂಕ : 28-01-2024 ಕೊನೆಯ ದಿನಾಂಕವಾಗಿದ್ದು, ವಿಜಯಪುರ ಜಿಲ್ಲೆಗೆ ಹಂಚಿಕೆ ಮಾಡಲಾದ ಹಾಗೂ ನಿಗದಿ ಪಡಿಸಿದ ಹಬ್ಗಳಲ್ಲಿ ಅರ್ಜಿದಾರರು ಇಚ್ಚಿಸುವ ಹಬ್ಗಳಿಗೆ ನಿಗಧಿತ ನಮೂನೆಯಲ್ಲಿ ಸಂಬಂಧಿತ ದಾಖಲೆಗಳೊಂದಿಗೆ ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಸಹಕಾರ ಸಂಗಗಳ ನಿಬಂಧನೆಯಂತೆ ಕಂಪನಿ ಕಾಯ್ದೆಯಡಿ ನೊಂದಾಯಿಸಿದ ಸಂಘ ಸಂಸ್ಥೆಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಸಂಸ್ಥೆ ನೋಂದಾಯಿಸಿದ ಪ್ರಮಾಣ ಪತ್ರ, ಪಹಣಿ ಪತ್ರ, ಜಾತಿ ಪ್ರಮಾಣ ಪತ್ರ, ಗುರುತಿನ ಪತ್ರ, ಬ್ಯಾಂಕ್ ಖಾತೆ ಸಂಖ್ಯೆ, 20 ಬಾಂಡ್ ಪೇಪರ್ ಮೇಲೆ ಹಬ್ನ್ನು ಪರಭಾರೆ ಮಾಡುವುದಿಲ್ಲ ಎಂಬ ಮುಚ್ಚಳಿಕೆ ಪತ್ರ ಹಾಗು ಎರಡು ವರ್ಷಗಳ ಲೆಕ್ಕ ಪರಿಶೋಧಕ ಪತ್ರ ಸಲ್ಲಿಸಬೇಕು.
ಶುಗರಕೇನ್ ಹಾರ್ವೆಸ್ಟರ್ ಹಬ್ಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಜಿದಾರರು ಎಲ್ಲ ದಾಖಲಾತಿಗಳೊಂದಿಗೆ ವ್ಯಾಪ್ತಿಯಲ್ಲಿ ಬರುವ ರೈತರೊಂದಿಗೆ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಕಟಾವಿಗೆ ಮಾಡಿಕೊಂಡ ಲಿಖಿತ ಒಪ್ಪಂದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ವಿಜಯಪುರ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.