Crime

ಮೆಡಿಕಲ್ ಸೀಟ್ ನೀಡುತ್ತೇವೆ ಎಂದು ವಿದ್ಯಾರ್ಥಿಗೆ ವಂಚನೆ :ಐವರು ಆರೋಪಿಗಳು ಅರೆಸ್ಟ್

ಮಂಗಳೂರು: ಮೆಡಿಕಲ್ ಸೀಟ್ ತೆಗೆಸಿ ಕೊಡುತ್ತೇನೆ ಎಂದು ಆಮಿಷ ನೀಡಿ ವಿದ್ಯಾರ್ಥಿಯೋರ್ವರಿಗೆ ಲಕ್ಷಾಂತರ ರೂಪಾಯಿ ಹಣವನ್ನು ವಂಚಿನೆ ಮಾಡಿ ಪರಾರಿಯಾದ ಐವರು ಆರೋಪಿಗಳು ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಮೈಸೂರಿನ ವಿದ್ಯಾರ್ಥಿ ಹಾಗೂ ಕುಟುಂಬದವರಿಗೆ ದಾವಣಗೆರೆಯಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಹೇಳಿ ಬರೋಬ್ಬರಿ 10.80 ಲಕ್ಷ ರೂಪಾಯಿ ದೋಚಿ ನಾಪತ್ತೆಯಾಗಿದ್ದರು.ಈ ಸಂಬಂಧ ಹೈಗ್ರೌಂಡ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿತ್ತು.

ಮೈಸೂರು ಮೂಲದ ವಿದ್ಯಾರ್ಥಿ ಮೆಡಿಕಲ್ ಸೀಟಿಗಾಗಿ ಯತ್ನಿಸುತ್ತಿದ್ದ. ಈ ಬಾರಿ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಬಂದಿಲ್ಲ ಎಂದು ಮತ್ತೊಮ್ಮೆ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ. ಈ ವೇಳೆ ನಾವು ನಾಲ್ಕೈದು ವರ್ಷಗಳಿಂದ ದಾವಣಗೆರೆಯಲ್ಲಿ ಮೆಡಿಕಲ್ ಸೀಟ್ ಕೊಡಿಸುತ್ತಿದ್ದೇವೆ ಎಂದು ಆರೋಪಿಗಳು ಮರುಳು ಮಾಡಿದ್ದರು ಎಂದು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button