ಯುವ ನ್ಯಾಯವಾದಿ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ | ಇಬ್ಬರು ವಶಕ್ಕೆ

ಸಂಕೇಶ್ವರ: ಯುವ ನ್ಯಾಯವಾದಿ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿರುವ ಘಟನೆ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದ್ದು, ಹಲ್ಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸದ್ಯ ಸಂಕೇಶ್ವರದ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸತ್ತಿರುವ ಸಾಗರ ಮಾನೆ ಹಲ್ಲೆಗೆ ಒಳಗಾಗಿರುವ ನ್ಯಾಯವಾದಿ ಆಗಿದ್ದಾರೆ. ಇವರು ಕಳೆದ ದಿ. 11 ರಂದು ತಮ್ಮ ಸ್ವಗ್ರಾಮವಾದ ಸೊಲ್ಲಾಪುರ ಗ್ರಾಮದ ಗೇಟ್ ಹತ್ತಿರ ಸುಮಾರು 10 ಜನರು ಸೇರಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಬಗ್ಗೆ ಸಂಕೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.

ಒಂದು ಕಡೆಯ ಗುಂಪಿನ ಕಕ್ಷಿದಾರನಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಕಾರಣದ ಹಿನ್ನೆಲೆಯಲ್ಲಿ ಈ ಹಲ್ಲೆಯನ್ನು ಮಾಡಲಾಗಿದೆ ಎಂದು ಪೊಲೀಸ್ ರಿಗೆ ನೀಡಲಾಗಿರುವ ದೂರಿನಲ್ಲಿ ವಿವರಿಸಲಾಗಿದೆ.
ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಸಂಕೇಶ್ವರ ಪೊಲೀಸರು ‌ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇನ್ನುಳಿದವರು ಪತ್ತೆಗಾಗಿ ಶೋದ ನಡೆಸಿದ್ದಾರೆ.

Latest Indian news

Popular Stories