ಯುವತಿಗೆ ಚಪ್ಪಲಿಯಿಂದ ಹೊಡೆದ ಯುವಕ

ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ಯುವತಿಯ ಮೇಲೆ ಚಪ್ಪಲಿಯಿಂದ ಹಲ್ಲೆಮಾಡಿ ದರ್ಪತೋರಿರುವ ಘಟನೆ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ನಡೆದಿದೆ.

ಶ್ರೀಶೈಲ ಮಸಳಿ ಎಂಬ ಯುವಕ ಯುವತಿಯ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾನೆ. ನಾಗಠಾಣ ಗ್ರಾಮದ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಅನ್ಯ ಕೋಮಿನ ಯುವತಿಯನ್ನು ಶ್ರೀಶೈಲ ಚುಡಾಯಿಸುತ್ತಿದ್ದನು. ಅದಕ್ಕಾಗಿ ಯುವತಿ ಚಪ್ಪಲಿ ತೋರಿಸಿದ್ದಾಳೆ. ಅದಕ್ಕಾಗಿ ಶ್ರೀಶೈಲ ಚಪ್ಪಲಿಯಿಂದ ಹೊಡೆದಿದ್ದಾನೆ ಎನ್ನಲಾಗಿದೆ. ಇನ್ನು ಯುವಕನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories