ಬಾಗ್ದಾಲ್ ಪೊಲೀಸ್ ಠಾಣೆ ಗಂಜ ಕೇಸ್ : Ganja Case

ದಿನಾಂಕ: Ganja Case ೨೭-೦೫-೨೦೨೧ ರಂದು ಬೆಳಿಗ್ಗೆ ೧೦:೧೦ ಗಂಟೆ ಸುಮಾರಿಗೆ ಶ್ರೀ ನಾಗೇಶ ಡಿ.ಎಲ್, ಮಾನ್ಯ ಪೊಲೀಸ್ ಅಧೀಕ್ಷಕರು ಬೀದರ, ಶ್ರೀ ಗೋಪಾಲ್ ಎಮ್. ಬ್ಯಾಕೋಡ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೀದರ, ಶ್ರೀ ಬಸವೇಶ್ವರ ಹೀರಾ, ಪೊಲೀಸ್ ಉಪಾಧೀಕ್ಷಕರು ಬೀದರ, ರವರ ಮಾರ್ಗದರ್ಶನದಲ್ಲಿ ಶ್ರೀ ಶ್ರೀಕಾಂತ ಅಲ್ಲಾಪೂರೆ, ಸಿ.ಪಿ.ಐ ಬೀದರ ಗ್ರಾಮೀಣ ವೃತ್ತ, ಬಗದಲ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀಮತಿ ಇಂದಿರಾಬಾಯಿ ಪಾಟೀಲ್, ಶ್ರೀ ಮೆಹಬೂಬ ಅಲಿ ಮತ್ತು ಸಿಬ್ಬಂದಿಯವರಾದ ರವಿಕಾಂತ ಸಿ.ಹೆಚ್.ಸಿ-೯೯೧, ಅಶೋಕ ಕೋಟೆ ಸಿಪಿಸಿ-೧೦೧೦, ಜಗದೀಶಕುಮಾರ ಸಿಪಿಸಿ-೧೩೮೧, ಅನುರಾಧಾ ಮಪಿಸಿ-೧೯೩೦ ಹಾಗೂ ಜೀಪಚಾಲಕ ಸಂಜುಕುಮಾರ ಎಪಿಸಿ-೩೨೯ ಹಾಗು ಪಂಚರೊAದಿಗೆ ಖಚಿತ ಬಾತ್ಮಿ ಮೇರೆಗೆ ಬೀದರ ತಾಲೂಕಿನ ಬಗದಲ ಪೊಲೀಸ್ ಠಾಣೆ ಸರಹದ್ದಿಯಲ್ಲಿ ಬರುವ ಮೀನಕೇರಾ ಕ್ರಾಸ್ ಹತ್ತಿರ ಆಟೋರಿಕ್ಷಾ ನಂ. ಕೆಎ-೩೮/ಎ-೦೨೪೫ ನೇದರಲ್ಲಿ ಇಬ್ಬರೂ ಮಹಿಳೆಯರು ಗಾಂಜಾವನ್ನು ಸಾಗಿಸುತ್ತಿದ್ದಾರೆಂದು ಬಾತ್ಮಿ ಬಂದ ಮೇರೆಗೆ ಸದರಿ ಆಟೋರೀಕ್ಷಾ ಮೇಲೆ ದಾಳಿ ಮಾಡಿ ಅವರ ವಶದಲ್ಲಿದ್ದ ೨೦ ಕೆಜಿ ಗಾಂಜಾ ಅ.ಕಿ. ೨,೦೦,೦೦೦/- ರೂ ಹಾಗೂ ಆಟೋರೀಕ್ಷಾ ಅ.ಕಿ. ೫೦,೦೦೦/- ರೂ. ಹಾಗೂ ಆರೋಪಿತರ ಹತ್ತಿರವಿದ್ದ ೨೦೦೦/- ರೂ. ಹೀಗೆ ಒಟ್ಟು ೨,೫೨,೦೦೦/- ರೂ ಮೌಲ್ಯದು ಜಪ್ತಿ ಮಾಡಿದ್ದು ಇರುತ್ತದೆ. ಸದರಿ ಗಾಂಜಾವನ್ನು ಸಾಗಿಸುತ್ತಿದ್ದ ಆರೋಪಿಗಳಾದ ೧] ಫಿಜಾ ಗಂಡ ಜಾಫರ, ವಯ : ೨೮ ವರ್ಷ, ಜಾತಿ : ಮುಸ್ಲಿಂ, ಉ : ಮನೆಕೆಲಸ, ಸಾ : ಸಹ್ಯಾದ್ರಿ ಬಿಲ್ಡಿಂಗ್, ಪಾಟೀಲ ನಗರ, ಭಾಸ್ಕರ ಶಾಲೆ ಹತ್ತಿರ ಅಂಬಾವಾಲಿ ಪಶ್ಚಿಮಕಲ್ಯಾಣ ಥಾಣೆ ಮಹಾರಾಷ್ಟç ೨] ಕುಲಸುಮಾ ತಂದೆ ಮಜುಲಮ್ ಅಫಜಲ್‌ಖಾನ, ವಯ : ೨೫ ವರ್ಷ, ಉ : ಮನೆಕೆಲಸ, ಸಾ : ಇಂದಿರಾನಗರ ಅಂಬಾವಾಲೆ ಸ್ಟೇಷನ ಹತ್ತಿರ ಪಶ್ಚಿಮಕಲ್ಯಾಣ ಥಾಣೆ ಮಹಾರಾಷ್ಟç, ರವರನ್ನು ದಸ್ತಗಿರಿ ಮಾಡಿ ಠಾಣೆಗೆ ತಂದು ಇವರ ವಿರುಧ್ಧ ಬಗದಲ ಪೊಲೀಸ್ ಠಾಣೆ ಅಪರಾಧ ಸಂ. ೩೧/೨೦೨೧ ಕಲಂ. ೨೦(ಬಿ)ii(ಸಿ) ಎನ.ಡಿ.ಪಿ.ಎಸ್. ಆಕ್ಟ್ ನೇದರಲ್ಲಿ ಪ್ರಕರಣ ದಾಖಲು ಮಾಡಲಾಗಿರುತ್ತದೆ.

    ಸದರಿ ಪ್ರಕರಣದಲ್ಲಿ ೨೦ ಕೆ.ಜಿ. ಗಾಂಜಾ ಮತ್ತು ಒಂದು ಆಟೋರಿಕ್ಷಾ ಹೀಗೆ ಒಟ್ಟು ೨,೫೨,೦೦೦/- ರೂ ಮೌಲ್ಯದ ವಸ್ತುವನ್ನು ಜಪ್ತಿ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವು ಶ್ಲಾಘನೀಯವಾಗಿದೆ

Latest Indian news

Popular Stories