Crime

ಬಳ್ಳಾರಿ: ರಸ್ತೆ ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು: ಪ್ರಕರಣ ದಾಖಲು

ಬಳ್ಳಾರಿ,ಹೊಸಪೇಟೆ,ಅ.05:- ಹೊಸಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂದಾಜು 40-45 ವಯಸ್ಸಿನ ಅಪರಿಚಿತ ವ್ಯಕ್ತಿಯು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಕುರಿತು ದೂರು ದಾಖಲಾಗಿದೆ ಎಂದು ಸಂಚಾರ ಪೊಲೀಸ್ ಠಾಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃತಪಟ್ಟ ವ್ಯಕ್ತಿಯ ಚಹರೆ :- 5.1 ಅಡಿ ಎತ್ತರ, ರಸ್ತೆ, ಗೋಧಿ ಮೈ ಬಣ್ಣ ಹೊಂದಿದ್ದು, ಸಾಧಾರಣ ಮೈಕಟ್ಟು ಇರುತ್ತದೆ, ತುಂಬುತೋಳಿನ ನೀಲಿ ಬಣ್ಣದ ಚುಕ್ಕೆ ಚುಕ್ಕೆ ಅಂಗಿ, ನೀಲಿ ಬಣ್ಣದ ಚುಕ್ಕೆ ಚುಕ್ಕೆ ಲುಂಗಿ, ನೀಲಿ ಬಣ್ಣದ ಚಡ್ಡಿ ಧರಿಸಿರುತ್ತಾನೆ.
ಈ ಸದರಿ ವ್ಯಕ್ತಿಯ ವಿಳಾಸ, ವಾರಸುದಾರರು ಹಾಗೂ ಸಂಬಂಧಿಕರ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ.08392-258100, ಎಸ್.ಪಿ ದೂ.ಸಂ.08392-258400, ಹೊಸಪೇಟೆ ಡಿ.ಎಸ್.ಪಿ ದೂ.ಸಂ.08394-224204, ಹೊಸಪೇಟೆ ಸಂಚಾರ ಠಾಣೆ ದೂ.ಸಂ.08394-230255 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button