
ಮಗು ಸಮೇತ ತಾಯಿ ಕಾಣೆ
ಬಳ್ಳಾರಿ,ಅ 05: ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ವಡ್ಡು ಗ್ರಾಮದ 32 ವರ್ಷ ಪರಿಮಳ ಎಂಬ ಮಹಿಳೆಯು ತನ್ನ 3 ವರ್ಷದ ತಿಪ್ಪೇಸ್ವಾಮಿ ಮಗುವಿಗೆ ಸೆ.30ರಂದು ಹುಷಾರಿಲ್ಲ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿಬರುತ್ತೇನೆ ಎಂದು ಹೋದವರು ಮರಳಿ ಬರದಿರುವ ಕಾರಣ ದೂರು ದಾಖಲಾಗಿದೆ ಎಂದು ತೋರಣಗಲ್ಲು ಪೊಲೀಸ್ ಠಾಣೆಯ ಪಿ.ಎಸ್.ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯ ಚಹರೆ: 5.5 ಅಡಿ ಎತ್ತರ, ಕೋಲುಮುಖ, ದೃಢವಾದ ಮೈಕಟ್ಟು, ಕೊರಳಲ್ಲಿ ಮಾಂಗಲ್ಯ ಸರವಿದ್ದು, ಎರಡು ಕೈಗಳಲ್ಲಿ ಬಂಗಾರದ ಬಳೆಗಳನ್ನು ಧರಿಸಿರುತ್ತಾಳೆ, ಮೂಗು ಮತ್ತು ಕೆನ್ನೆಯ ಮೇಲೆ ಕಪ್ಪು ಕಲೆಯಿದ್ದು, ಕನ್ನಡ, ಹಿಂದಿ ಭಾಷೆಯನ್ನು ಮಾತನಾಡುತ್ತಾಳೆ.
ಮಗು ಚಹರೆ: ಸಾಧರಣ ಕಪ್ಪು ಮೈ ಬಣ್ಣ, ದೃಢವಾದ ಮೈಕಟ್ಟು, ಕೊರಳಲ್ಲಿ ಕೆಂಪುದಾರದ ತಾಯತ, ಕಾಲಲ್ಲಿ ತಾಮ್ರದ ಕಾಲು ಕಡಗ, ಬಲಕಿವಿಯಲ್ಲಿ ಬಿಳಿ ಹರಳಿನ ಬಂಗಾರದ ಓಲೆ ಹೊಂದಿರುತ್ತಾನೆ.
ಈ ತಾಯಿ ಮತ್ತು ಮಗುವಿನ ಬಗ್ಗೆ ಯವುದೇ ಮಾಹಿತಿ ಸಿಕ್ಕಲ್ಲಿ ತೋರಣಗಲ್ಲು ಪೊಲೀಸ್ ಠಾಣೆ ದೂ.ಸಂ.08392-250100, ಮೊ.ಸಂ.9480803062, ಸಂಡೂರು ಸಿ.ಪಿ.ಐ. ದೂ.ಸಂ.08395-260100, ಮೊ.ಸಂ.9480803036, ಕೂಡ್ಲಿಗಿ ಡಿ.ವೈ.ಎಸ್.ಪಿ ದೂ.ಸಂ.08391-220326, ಎಸ್.ಪಿ ದೂ.ಸಂ.08392-258300 ಹಾಗೂ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ.08392-279100ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವ್ಯಕ್ತಿ ಕಾಣೆ ದೂರು ದಾಖಲು:- ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಲಾಂ ಬೀದಿಯ 40 ವರ್ಷದ ಮಹಮ್ಮದ್ ಎಂಬ ವ್ಯಕ್ತಿಯು ಆಗಷ್ಟ್ 18ರಿಂದ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ ಎಂದು ಕೌಲ್‍ಬಜಾರ್ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ : 5.5 ಅಡಿ ಎತ್ತರ, ಸಾದಾರಣ ಮೈಕಟ್ಟು, ಗೋಧಿ ಮೈಬಣ್ಣ, ಬ್ಲೂ ಬಣ್ಣದ ಶರ್ಟ್, ಬ್ರೌನ್ ಬಣ್ಣದ ಪ್ಯಾಂಟ್, ಧರಿಸಿರುತ್ತಾರೆ ಮೆಹಂದಿ ಹಾಕಿದ ಕಪ್ಪು ಮತ್ತು ಕೆಂಪುಕೂದಲು, ಕನ್ನಡ ಉರ್ದು,ತೆಲುಗು ಭಾಷೆ ಮಾತನಾಡುತ್ತಾರೆ.
ಸದರಿ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆ ಹಾಗೂ ಕೌಲ್‍ಬಜಾರ್ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಅವರು ಪ್ರÀಕಟಣೆಯಲ್ಲಿ ತಿಳಿಸಿದ್ದಾರೆ.




