ಬಂಟ್ವಾಳ, ಫೆ.15: ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ನದಿಗೆ ಹಾರಿದ ಘಟನೆ ಫೆ.15ರ ಗುರುವಾರ ಬೆಳಗ್ಗೆ 6.20ರ ಸುಮಾರಿಗೆ ನಡೆದಿದೆ.
ಮೃತ ಮಹಿಳೆಯ ಬ್ಯಾಗ್‌ನಲ್ಲಿ ಲಭ್ಯವಾದ ಆಧಾರ್ ಕಾರ್ಡ್ ಪ್ರಕಾರ, ಮಹಿಳೆ ತುಮಕೂರು ಮೂಲದ ನಯನ್ ಎಂಜಿ (27) ಎಂದು ರೈಲ್ವೆ ಪೊಲೀಸರು ಶಂಕಿಸಿದ್ದಾರೆ. ಆಕೆ ಕಣ್ಣೂರು-ಬೆಂಗಳೂರು-ಮಂಗಳೂರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು.
ಬಿ.ಸಿ.ರೋಡ್‌ನ ನೇತ್ರಾವತಿ ನದಿಯ ರೈಲ್ವೆ ಮೇಲ್ಸೇತುವೆ ಮೇಲೆ ರೈಲು ಚಲಿಸುತ್ತಿದ್ದಾಗ ಮಹಿಳೆ ರೈಲಿನಿಂದ ಜಿಗಿದಿದ್ದಾಳೆ. ರೈಲ್ವೇ ಸಿಬ್ಬಂದಿ ಬಿ.ಸಿ.ರೋಡ್ ಕಚೇರಿಗೆ ವಿಷಯ ತಿಳಿಸಿ ಆಕೆಯ ಬ್ಯಾಗನ್ನು ಒಪ್ಪಿಸಿದ್ದಾರೆ.
ಆತ್ಮಹತ್ಯೆಗೆ ಕಾರಣ ಮತ್ತು ವ್ಯಕ್ತಿಯ ಗುರುತು ಇನ್ನೂ ತಿಳಿದು ಬಂದಿಲ್ಲ. ನದಿಯಲ್ಲಿ ತೇಲುತ್ತಿದ್ದ ಮೃತದೇಹವನ್ನು ಸ್ಥಳೀಯ ಮುಳುಗು ತಜ್ಞರಾದ ಮೊಹಮ್ಮದ್ ಮತ್ತು ತಂಡವು ಮೇಲೆತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣೆ ಎಎಸ್‌ಐ ದೇವಪ್ಪ ವಿಜಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.