ಕಾರವಾರದಲ್ಲಿ ಬಸವಣ್ಣನ ಜಯಂತಿ ಆಚರಣೆ :ಶರಣರು ಸಮಾನತೆಯ ಸಾಧಕರು : ವೀರಯ್ಯ ಸ್ವಾಮಿ‌

ಕಾರವಾರ : ವಿಶ್ವ ಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ರವರ ಜಯಂತಿ ಆಚರಣೆ ಕಾರ್ಯಕ್ರಮವು ಶುಕ್ರವಾರ
ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ,ಬಸವಣ್ಣ ಅವರ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರಮಾತನಾಡಿದ ಅವರು‌ ಬಸವಣ್ಣನವರು ಸಮಾಜದಲ್ಲಿ ಸಮಾನಾತೆಯನ್ನು ತಂದ ಸಾಧಕರು. ಕಾಯಕ ,ದಾಸೋಹ ತತ್ವವನ್ನು ಜನರಿಗೆ ನೀಡಿದರು.‌ ಎಲ್ಲರೂ ದುಡಿದು ಬದುಕಬೇಕು. ದುಡಿಮೆಯ ಒಂದು ಭಾಗವನ್ನು ಸಮಾಜದ ಒಳಿತಿಗೆ, ದಾಸೋಹಕ್ಕೆ ನೀಡಬೇಕೆಂದರು. ಅನುಭವ ಮಂಟಪದ ಮೂಲಕ ಸರ್ವರು ತಮ್ಮ ಅಭಿಪ್ರಾಯ ಹೇಳಲು ಅವಕಾಶ ಮಾಡಿಕೊಟ್ಟರು ಎಂದರು. ಹನ್ನೆರಡನೇ‌ ಶತಮಾನದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ವೈಚಾರಿಕ ಕ್ರಾಂತಿಯೇ ನಡೆಯಿತು ಎಂದು ವೀರಯ್ಯ ಸ್ವಾಮಿ ಅಭಿಪ್ರಾಯಪಟ್ಟರು. ‌ಬಸವಣ್ಣ ಸಮ‌ಸಮಾಜದ ಕನಸು ಬಿತ್ತಿದರು. ಅದು ಇವತ್ತು ಫಲ ಕೊಡುತ್ತಿದೆ‌ ಎಂದು ಅವರು ನುಡಿದರು. ವಚನ ಕಾಲದಲ್ಲಿ ಎಲ್ಲಾ‌ ಸಮುದಾಯಗಳ ಜನರು ಕನ್ನಡದಲ್ಲಿ , ಅದು ಜನ ಮಾತಾಡುವ ಕನ್ನಡದಲ್ಲಿ ವಚನಗಳನ್ನು ಬರೆದರು.‌ ಇದು‌ ಬಹುದೊಡ್ಡ ದಾಖಲೆ‌ ಎಂದು ಹೇಳಿದರು.ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸಂಕೇತಿಕವಾಗಿ ಬಸವ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ , ಲಿಂಗಾಯತ ‌ ಸಮುದಾಯದ ಸಾರ್ವಜನಿಕರು ಹಾಗೂ ಕನ್ನಡ ಸಂಸ್ಕೃತಿ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
…….

Latest Indian news

Popular Stories