INTERNATIONAL

ಲೈಬೀರಿಯಾ: ಇಂಧನ ಟ್ಯಾಂಕರ್ ಸ್ಫೋಟಗೊಂಡು ಘೋರ ದುರಂತ : 40 ಮಂದಿ ಮೃತ್ಯು

ಲೈಬೀರಿಯಾ: ಉತ್ತರ-ಮಧ್ಯ ಲೈಬೀರಿಯಾದಲ್ಲಿ ಅನಿಲ ಟ್ಯಾಂಕರ್ ಸ್ಫೋಟಗೊಂಡ ನಂತರ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ.

ಲೋವರ್ ಬಾಂಗ್ ಕೌಂಟಿಯ ಟೊಟೊಟಾದಲ್ಲಿ ಇಂಧನ ಟ್ರಕ್ ಸ್ಪೋಟಗೊಂಡಿದೆ.ಈ ದುರ್ಘಟನೆಯಲ್ಲಿ 40 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗಿದೆ.

ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಕಳಪೆ ರಸ್ತೆ ಸುರಕ್ಷತೆ ಮತ್ತು ದುರ್ಬಲ ಮೂಲಸೌಕರ್ಯಗಳು ಉಪ-ಸಹಾರನ್ ಆಫ್ರಿಕಾವನ್ನು ಅಪಘಾತಗಳಿಗೆ ವಿಶ್ವದ ಮಾರಕ ಪ್ರದೇಶವನ್ನಾಗಿ ಮಾಡಿವೆ, ಸಾವಿನ ಪ್ರಮಾಣವು ಯುರೋಪಿಯನ್ ಸರಾಸರಿಗಿಂತ ಮೂರು ಪಟ್ಟು ಹೆಚ್ಚಾಗಿದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button