
ಇದ್ದು ಇಲ್ಲದಂತಾದ ಬಸ್ ನಿಲ್ದಾಣಗಳು | ಸಾರ್ವಜನಿಕರ ಆಕ್ರೋಶ
ಬೀದರ್ : ನಗರದ ಹಲವು ಕಡೆಗಳಲ್ಲಿ ಕೆಕೆಆರ್ಡಿಬಿ ಅನುದಾನದಲ್ಲಿ 14ಕ್ಕೂ ಹೆಚ್ಚು ನಿಲ್ದಾಣಗಳನ್ನ ನಿರ್ಮಾಣ ಮಾಡಲಾಗಿದೆ. ಆದ್ರೆ ಬಸ್ ನಿಲ್ದಾಣಗಳು ಅವೈಜ್ಞಾನಿಕವಾಗಿದ್ದು, ಸಾರ್ವಜನಿಕರ ಬಳಕೆಗೆ ಬಾರದಂತಾಗಿವೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ನಗರದ ಗಾಂಧಿ ಗಂಜ್, ರೇಲ್ವೆ ಸ್ಟೇಷನ್, ನೆಹರು ಸ್ಟೇಡಿಯಂ ಹತ್ತಿರ ಸೇರಿದಂತೆ ಹಲವು ಕಡೆಗಳಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದು ಒಂದು ನಿಲ್ದಾಣವೂ ಕೂಡಾ ಸಾರ್ವಜನಿಕರ ಅನುಕೂಲಕ್ಕೆ ಬಾರದಂತಾಗಿವೆ.
ಪ್ರತಿ ಬಸ್ ನಿಲ್ದಾಣಕ್ಕೆ ಸುಮಾರು 5-6 ಲಕ್ಷ ಖರ್ಚು ಮಾಡಿ, ಆಸನ ಹಾಗು ಲೈಟ್ಗಳನ್ನ ಅಳವಡಿಕೆ ಮಾಡಿ ನಿರ್ಮಾಣ ಮಾಡಲಾಗಿದೆ. ಆದರೆ ಅವುಗಳಸೂಕ್ತ ನಿರ್ವಹಣೆ ಮಾಡದೇ ಇದ್ದುದ್ದರಿಂದ ಪಾಳು ಬಿದ್ದಿವೆ. ಕೆಲವು ನಿಲ್ದಾಣಗಳು ಬಸ್ ನಿಲ್ದಾಣದ ಬದಲಾಗಿ ಬೈಕ್ ನಿಲ್ದಾಣವಾಗಿ ಮಾರ್ಪಾಡಾಗಿವೆ. ಇನ್ನು ಕೆಲವು ನಿಲ್ದಾಣಗಳಂತು ದುಸ್ತಿತಿಯಲ್ಲಿದ್ದು, ಬಸ್ ಸ್ಟ್ಯಾಂಡ್ಗಳಲ್ಲಿ ನಿಲ್ಲಲು ಪ್ರಯಾಣಿಕರು ಆತಂಕಪಡುವ ಸ್ಥಿತಿಯಲ್ಲಿವೆ.
ಅಂದಾಜು ಮೂರು ಲಕ್ಷ ಹಣದಲ್ಲಿ ಮುಗಿಯಬಹುದಾದ ಬಸ್ ನಿಲ್ದಾಣಗಳನ್ನ 6-7 ಲಕ್ಷ ಹಣದಲ್ಲಿ ನಿರ್ಮಾಣ ಮಾಡಿ, ಸಾರ್ವಜನಿಕರು ಕಿಡಿಕಾರುತ್ತಿದ್ದು, ಬಸ್ ನಿಲ್ದಾಣಗಳು ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ನಿರ್ಮಿಸಬೇಕಿತ್ತು ಎಂದು ಅಸಮಧಾನ ಹೊರಹಾಕುತ್ತಿದ್ದಾರೆ.
ವರದಿ : ಹಣಮಂತ ದೇಶಮುಖ ಬೀದರ್




