
ಚಿತ್ರ: ಖಾಲಿ ಲಾರಿಯಲ್ಲಿ ಮಾದಕ ವಸ್ತು ಸಾಗಾಟ,305 ಕೆಜಿ ಗಾಂಜಾ ಸಿಜ್
ಓಡಿಸ್ಸಾ ರಾಜ್ಯದಿಂದ ಮಹಾರಾಷ್ಟಕ್ಕೆ ಅಕ್ರಮವಾಗಿ ಸಾಗಿಸುತ್ತಿದ 305 ಕೆ ಜಿ ಗಾಂಜಾವನ್ನು ಪೋಲಿಸರು ವಶಕ್ಕೆ ಪಡೆದ್ದಿದ್ದಾರೆ.
ಬೆಳ್ಳಿಗಿನ ಜಾವ ಹೈದ್ರಾಬಾದ್ ಕಡೆಯಿಂದ ಮುಂಬಯಿ ಕಡೆಗೆ ಒಂದು ಲಾರಿ ಮತ್ತು ಒಂದು ಕಾರಿನಲ್ಲಿ ಅನಧಿಕೃತವಾಗಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಈಶ್ಯಾನ ವಲಯ ಡಿಐಜಿಪಿ ಕಲಬುರಗಿಯವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು ,ನಾಲ್ಕು ಜನ ಅರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 3 ಕೋಟಿ ಮೌಲ್ಯದ 305 ಕೆ ಜಿ ಗಾಂಜಾ ,ಕೃತ್ಯಕ್ಕೆ ಬಳಸಿದ ಲಾರಿ,04 ಮೊಬೈಲ್ ಫೋನ್ ಮತ್ತು 9230 ನಗದು ವಶಕ್ಕೆ ಪಡೆಯಲಾಗಿದೆ.ಬಂಧಿತರು ಒಡಿಸ್ಸ್ ಮೂಲಕ್ಕೆ ಸೇರಿದ್ದಾರೆ ಎಂಬ ಮಾಹಿತಿಯಿದ್ದು ತನಿಖೆ ಮುಂದುವರೆದ್ದಿದೆ,ಕಾರ್ಯಾಚರಣೆಯಲ್ಲಿ ಭಾಗಿಯಾಗಿದ ಪೋಲಿಸ್ ಸಿಬ್ಬಂದಿಗಳಿಗೆ ಬಹುಮಾನ ಕೂಡ ನೀಡಲಾಗುವುದು ಎಂದು ಜಿಲ್ಲಾ ಪೋಲಿಸ್ ವರಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ .




