
ಬೀದರ್ :ಸಚಿವ ಪ್ರಭು ಚವ್ಹಾಣ್ ಬೆಳೆಹಾನಿ ಪರಿಶೀಲನೆ
ಬೀದರ್ :ಅಕ್ಟೋಬರ್ 7:-ಪಶು ಸಂಗೋಪನೆ, ಹಜ್ ಮತ್ತು ವಕ್ಫ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಅಕ್ಟೋಬರ್ 8ರಂದು ಬೀದರ್ ಜಿಲ್ಲೆಯ ಪ್ರವಾಸ ಕೈಗೊಂಡಿದ್ದು, ಕೋಳಾರ, ಆಣದೂರ, ಹಲಬರ್ಗಾ, ಹೊಳಸಮುದ್ರ, ಡಿಗ್ಗಿ, ಕಮಲನಗರಕ್ಕೆ ಭೇಟಿ ನೀಡಿ ಅತಿವೃಷ್ಟಿಯಿಂದ ಬೆಳೆಹಾನಿಯಾದ ಕ್ಷೇತ್ರಗಳ ಪರಿಶೀಲನೆ ನಡೆಸುವರು.
ಅಕ್ಟೋಬರ್ 8ರ ಬೆಳಗ್ಗೆ 9ಕ್ಕೆ ಬೋಂತಿಯಿಂದ ರಸ್ತೆ ಮಾರ್ಗವಾಗಿ ಬೀದರಗೆ ಪ್ರಯಾಣ ಬೆಳೆಸುವರು. ಬೆಳಗ್ಗೆ 11.30ಕ್ಕೆ ದಿವಂಗತ ಅನಿಲ ಗುಂಡಪ್ಪ ಅವರ ಮನೆಗೆ ಭೇಟಿ ನೀಡುವರು. ಬಳಿಕ ಮಧ್ಯಾಹ್ನ 12 ಗಂಟೆಗೆ ರಸ್ತೆ ಮೂಲಕ ಕೋಳಾರ ಗ್ರಾಮಕ್ಕೆ ಪ್ರಯಾಣಿಸಿ ಅತಿವೃಷ್ಟಿಯಿಂದ ಬೆಳೆಹಾನಿಯಾದ ಕ್ಷೇತ್ರಗಳ ಪರಿಶೀಲನೆ ನಡೆಸುವರು. ಮಧ್ಯಾಹ್ನ 12.30ಕ್ಕೆ ಆಣದೂರಗೆ ಭೇಟಿ ನೀಡುವರು. ಮಧ್ಯಾಹ್ನ 1.30ಕ್ಕೆ ಹಲಬರ್ಗಾ ಭೇಟಿ ನೀಡುವರು., ಮಧ್ಯಾಹ್ನ 2.30ಕ್ಕೆ ಹೊಳಸಮುದ್ರಕ್ಕೆ ಭೇಟಿ, ಮಧ್ಯಾಹ್ನ 3.30ಕ್ಕೆ ಡಿಗ್ಗಿಗೆ ಭೇಟಿ, ಸಂಜೆ 4.30ಕ್ಕೆ ಕಮಲನಗರಕ್ಕೆ ಭೇಟಿ ನೀಡಿ ಆಯಾ ಕಡೆಗಳಲ್ಲಿ ಅತಿವೃಷ್ಟಿಯಿಂದಾದ ಹಾನಿ ಪರಿಶೀಲನೆ ನಡೆಸುವರು. ಸಂಜೆ 5.30ಕ್ಕೆ ಕಮಲನಗರದಿಂದ ರಸ್ತೆಮೂಲಕ ಉದಗೀರಗೆ ಪ್ರಯಾಣಿಸಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸಂಜೆ 6 ಗಂಟೆಗೆ ಉದಗೀರನಿಂದ ರಸ್ತೆ ಮೂಲಕ ಬೋಂತಿ ತಾಂಡಾಕ್ಕೆ ಪ್ರಯಾಣಿಸಿ ವಾಸ್ತವ್ಯ ಮಾಡುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




