Crime

ಕಲಬುರಗಿ: ಅನಧೀಕೃತವಾಗಿ ನೀರು ಸರಬರಾಜು ಮಾಡುತ್ತಿರುವ ನೀರಿನ ಘಟಕಗಳ ಜಪ್ತಿ

ಕಲಬುರಗಿ.ಅಕ್ಟೋಬರ್.07:- ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ. ಶಿವಶರಣಪ್ಪಾ ಎಂ.ಡಿ ಭೂಸನೂರ ಹಾಗೂ ಸಿಬ್ಬಂದಿನ್ನೊಳಗೊಂಡ ತಂಡವು ಮಂಗಳವಾರ ಕಲಬುರಗಿ ನಗರದಲ್ಲಿ ಅನಧೀಕೃತವಾಗಿ ಸರಬರಾಜು ಮಾಡುತ್ತಿರುವ ನಾಲ್ಕು ನೀರಿನ ಘಟಕಗಳಿಗೆ ಅನಿರೀಕ್ಷಿತವಾಗಿ ದಾಳಿ ನಡೆಸಿ ಜಪ್ತಿ ಮಾಡಲಾಯಿತು.
ಅಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಮತ್ತು 2011ರ ಅಡಿ ಜಿಲ್ಲೆಯಲ್ಲಿ ಪರವಾನಿಗೆ ಮತ್ತು ನೋಂದಣಿ ಮಾಡಿಕೊಳ್ಳದೇ ಅನಧಿಕೃತವಾಗಿ ನಡೆಸುತ್ತಿರುವ ನೀರಿನ ಘಟಕಗಳು ಮತ್ತು ಸರಬರಾಜು ಮಾಡುತ್ತಿರುವ ವಾಹನಗಳು ಸ್ವಯಂ ಪ್ರೇರಿತರಾಗಿ ನೀರಿನ ಘಟಕಗಳನ್ನು ಮುಚ್ಚಬೇಕು. ಅನಧಿಕೃತವಾಗಿ ಘಟಕಗಳನ್ನು ನಡೆಸುತ್ತಿರುವುದು ಕಂಡು ಬಂದಲ್ಲಿ ಅಂತಹ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ಐ.ಎಸ್.ಐ. ಪರವಾನಿಗೆ ಪಡೆದ ಘಟಕಗಳು ಒಂದು ವಾರದೊಳಗಾಗಿ ಎಲ್ಲಾ ಹಳೆಯ ಕ್ಯಾನ್‍ಗಳನ್ನು ಬದಲಿಸಿ ಹೊಸ ಕ್ಯಾನ್‍ಗಳನ್ನು ಉಪಯೋಗಿಸಬೇಕು. ಐ.ಎಸ್.ಐ., ಬಿ.ಎಸ್.ಐ. ದಿಂದ ಪಡೆದ ಪರವಾನಿಗೆ ಸಂಖ್ಯೆ ಮತ್ತು ಈSSಂI ಪರವಾನಿಗೆ ಸಂಖ್ಯೆ ಹಾಗೂ ಚಿಹ್ನೆ ಹೊಂದಿದ ಹಾಗೂ ಆಚಿಣe oಜಿ ಒಚಿಟಿuಜಿಚಿಛಿಣuಡಿe, ಃesಣ ಃeಜಿoಡಿe ಮತ್ತು ಸೀಲ್ಡ್ (Seಚಿಟeಜ ಅoveಡಿ) ಮಾಡಿದ ಕ್ಯಾನ್‍ಗಳನ್ನು ಮಾತ್ರ ಸರಬರಾಜು ಮಾಡಬೇಕು. ನೀರು ಸರಬರಾಜು ಮಾಡುವ ವಾಹನಗಳು ಈSSಂI ಪರವಾನಿಗೆ/ನೋಂದಣಿ ಮಾಡಿಸಿಕೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಅಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ-2006 ಮತ್ತು 2011 ರ ನಿಯಮದಡಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button