
Crime
ಬೀದರ್: ಸಾವಿತ್ರಿಬಾಯಿ ಫುಲೆ ಜಯಂತಿ
ಬೀದರ್,ಜ.19:- ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಭವನದಲ್ಲಿ ಜನತಾ ಹೂವು ಮಾರಾಟಗಾರರ ಸಂಸ್ಥೆಯಿಂದ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ 190ನೇಯ ಜಯಂತಿ ಆಚರಿಸಲಾಯಿತು.
ನಿವೃತ್ತ ಶಿಕ್ಷಣ ಇಲಾಖೆಯ ಅಧಿಕಾರಿ ತುಳಸಿರಾಮ ಕುಂಬಾರೆ ವಹಿಸಿದರು. ಮುಖ್ಯ ಅತಿಥಿಯಾಗಿ ಶ್ರೀದೇವಿ ಹೂಗಾರ ಮಾತÀನಾಡಿ, ಮಹಾಮಾತೆ ಸಾವಿತ್ರಿಬಾಯಿ ಫುಲೆ ಅವರು ತಮಗೆ ಆದ ನೋವು-ನಲಿವುಗಳನ್ನ ಮರೆತು ದಲಿತ ಸಮಾಜದ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರಜ್ಞಾನ ನೀಡಿ ದೇಶದ ಮೊದಲ ಶಿP್ಪ್ಷಕಿಯಾಗಿದ್ದಾರೆ ಎಂದು ಹೇಳಿದರು.
ಸುಕುರಮಿಯಾ, ಎಮ್.ಡಿ. ಹಬಿಬೋದ್ದಿನ್, ಎಮ್.ಡಿ. ಸಲೀಮ್, ಸಾವಿತ್ರಿಬಾಯಿ ಫುಲೆ ಅವರನ್ನು ಕುರಿತು ನಾಟಕ ರಚಿಸಿರುವ ಪ್ರಭು ಮಾಲೆ, ಶಿಕ್ಷಕಿ ಸುವರ್ಣಾ, ರಾಜೇಶ್ವರಿ ಮತ್ತಿತರರು ಇದ್ದರು. ಸಂಸ್ಥೆಯ ಅಧ್ಯಕ್ಷ ಸಿದ್ದಪ್ಪ ಫುಲಾರಿ ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಎಸ್.ಬಿ. ಕುಚಬಾಳ ನಿರೂಪಿಸಿದರು. ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.




