Crime

ಬೀದರನಲ್ಲಿ ಎನ್‍ಸಿಸಿ ವಾರ್ಷಿಕ ತರಬೇತಿ ಶಿಬಿರ

ಬೀದರ್,ಜ.19:- ಎನ್.ಸಿ.ಸಿ. ವಾರ್ಷಿಕ ತರಬೇತಿ ಶಿಬಿರ ನಗರದ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿದೆ. 18 ರಂದು ಆರಂಭವಾಗಿರುವ ಐದು ದಿನಗಳ ಶಿಬಿರ ಜ.22 ರವರೆಗೆ ನಡೆಯಲಿದೆ.
ಎನ್.ಸಿ.ಸಿ. ಅಧಿಕಾರಿ ಡಾ. ಪಿ. ವಿಠ್ಠಲರಡ್ಡಿ, ಸಿ.ಟಿ.ಓ. ಅಶ್ವಿನ ಚೌಹಾಣ, ನಾಯಬ್ ಸುಬೇದಾರ ಪಲ್ವಿಂದರ್‍ಸಿಂಗ್ ಹಾಗೂ ಹವಾಲ್ದಾರ ರವಿ ಅವರು ಸಸಿಗೆ ನೀರು ಹಾಕುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಮೇಜರ್ ರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮಯ ಪಾಲನೆ ಮಹತ್ವ ತಿಳಿಸಿದರು.
ಭೂಮರಡ್ಡಿ ಪದವಿ ಮಹಾವಿದ್ಯಾಲಯ, ಕರ್ನಾಟಕ ಕಾಲೇಜು, ಭಾಲ್ಕಿಯ ಸಿ.ಬಿ. ಕಾಲೇಜು, ಶಿವಾಜಿ ಪದವಿ ಮಹಾವಿದ್ಯಾಲಯ, ಬಸವಕಲ್ಯಾಣದ ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಮಹಾವಿದ್ಯಾಲಯ ಹಾಗೂ ಮಾಣಿಕನಗರ ಪದವಿ ಪೂರ್ವ ಕಾಲೇಜಿನ ಒಟ್ಟು 308 ಎನ್.ಸಿ.ಸಿ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ವಾರ್ಷಿಕ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button