ಬೈಂದೂರು: ಮಲಗಿದ್ದ 42 ದಿನದ ಹಸುಗೂಸು ಮೃತ್ಯು

ಬೈಂದೂರು: ತಾಯಿಯ ಎದೆ ಹಾಲು ಕುಡಿದು ಮಲಗಿದ್ದ ಮಗುವೊಂದು ನಿಧನವಾದ ಕುರಿತು ವರದಿಯಾಗಿದೆ.

ಅನಿತಾ (37) ಎಂಬುವವರು 42 ದಿನಗಳ ಹಿಂದೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ನಾರ್ಮಲ್ ಹೆರಿಗೆ ಆಗಿದ್ದು, ಮಗು ಆರೋಗ್ಯವಾಗಿರುತ್ತದೆ.  ಮಗು ಸಂಕೇತ (42 ದಿನ) ಆತನಿಗೆ ಮನೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಎದೆಹಾಲು ಕುಡಿಸಿ ತೇಗಿಸಿ ಮಲಗಿಸಿದ್ದು ಬಳಿಕ ಪುನಃ ಎಚ್ಚರಗೊಂಡ ಮಗುವಿಗೆ ಎದೆಹಾಲು ಕುಡಿಸಿ ಮಲಗಿಸಿದ್ದು,  ಬೆಳಿಗ್ಗೆ 11:15 ಗಂಟೆಗೆ ಮಗು ಎಚ್ಚರಗೊಂಡಾಗ ಮೈ ತಣ್ಣಗಾಗಿದ್ದು, ಯಾವುದೇ ಚಟುವಟಿಕೆ ಇಲ್ಲದೇ ಯಾವುದಕ್ಕೂ ಸ್ಪಂದಿಸದೇ ಇರುವುದನ್ನು ಕಂಡು ಮಗುವಿನ ತಂದೆ ಜನಾರ್ಧನ ಸೇರಿ ಅಂಬುಲೆನ್ಸ್ ವಾಹನದಲ್ಲಿ ಬೈಂದೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಾಗ ಮಧ್ಯಾಹ್ನ 01:10 ಗಂಟೆಯ ಸಮಯಕ್ಕೆ ವೈದ್ಯರು ಪರೀಕ್ಷಿಸಿ ಚಿಕಿತ್ಸೆಗೆ ಕರೆತರುವ ದಾರಿಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿಆರ್‌ ಕ್ರಮಾಂಕ 09/2024  ಕಲಂ: 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories