Crime

ಅಮೆರಿಕಾದಲ್ಲಿ ದಶಲಕ್ಷ ಮಂದಿಗೆ ಕೊರೊನಾ ಲಸಿಕೆ: ನಿರ್ದೇಶಕ ರಾಬರ್ಟ್ ರೆಡ್‌ಫೀಲ್ಡ್

ವಾಷಿಂಗ್ಟನ್, ಡಿ 24 (ಸ್ಪುಟ್ನಿಕ್) ಅಮೆರಿಕಾದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತರುವಲ್ಲಿ ಪ್ರಮುಖ ಅಡಚಣೆ ದಾಟಿ ಒಂದು ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಕೊರೊನಾ ವೈರಸ್ ಲಸಿಕೆಯ ಮೊದಲ ಎರಡು ಡೋಸ್ ಗಳನ್ನು ಪಡದುಕೊಂಡೊದ್ದಾರೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ನಿರ್ದೇಶಕ ರಾಬರ್ಟ್ ರೆಡ್‌ಫೀಲ್ಡ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಮೆರಿಕಾ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ – ಹತ್ತು ದಿನಗಳ ಹಿಂದೆ ಪ್ರಾರಂಭವಾದ ಲಸಿಕೆ ಕಾರ್ಯಕ್ರಮದಲ್ಲಿ 1 ದಶ ಲಕ್ಷಕ್ಕೂ ಹೆಚ್ಚು ಮಂದಿ ಮೊದಲ ಎರಡು ಡೋಸ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ರೆಡ್ಫೀಲ್ಡ್ ಬುಧವಾರ ಹೇಳಿದ್ದಾರೆ.
ಎಲ್ಲರಿಗೂ ಲಸಿಕೆ ಲಭ್ಯವಾಗುವವರೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ರೆಡ್‌ಫೀಲ್ಡ್ ಅಮೆರಿಕನ್ನರನ್ನು ಒತ್ತಾಯಿಸಿದ್ದಾರೆ. ಈ ವಾರದ ಅಂತ್ಯದ ವೇಳೆಗೆ, ಅಮೆರಿಕಾ ಅಧಿಕಾರಿಗಳು ಎರಡು ಅನುಮೋದಿತ ಲಸಿಕೆಗಳ ಸುಮಾರು 10 ದಶಲಕ್ಷ ಡೋಸ್‌ಗಳನ್ನು ವಿತರಿಸಿದ್ದಾರೆ, ಸರ್ಕಾರದ ಕೋರಿಕೆಯಂತೆ ಲಸಿಕೆ ಅಭಿವೃದ್ದಿ ಸಂಸ್ಥೆಗಳಾದ ಫೈಝರ್ , ಬಯೋಟೆಕ್ ಮತ್ತು ಮಾಡರ್ನಾ ಲಕ್ಷಾಂತರ ಪ್ರಮಾಣದಲ್ಲಿ ಲಸಿಕೆಗಳನ್ನು ಪೂರೈಸಲಿವೆ. ಪ್ರತಿ ಲಸಿಕೆಯನ್ನು ಎರಡು ಹಂತಗಳಲ್ಲಿ ನೀಡಲಾಗುತ್ತಿದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button