
ರಾಯಚೂರು: ಹೋರಾಟ ನಡೆಸುತ್ತಿರುವ ಮಹಿಳೆಯರನ್ನು ಬಂಧಿಸಿರುವುದು ಖಂಡನೀಯ, ಕೂಡಲೇ ಬಿಡುಗಡೆಗೊಳಿಸಲು ಸಿಪಿಐ(ಎಂಎಲ್)ರೆಡ್ ಸ್ಟಾರ್ ಆಗ್ರಹ
ರಾಯಚೂರು,ಅ.5:- ಉತ್ತರಪ್ರದೇಶದ ಹತ್ರಾಸ್‍ನ ಬಲರಾಂಪುರ ಮತ್ತು ಭದೋಹಿ ಯಲ್ಲಿ ನಾಲ್ಕು ಜನ ಕಾಮುಖರು 19 ವರ್ಷದ ದಲಿತ ಬಾಲಕಿ ಮನಿಷಾ ವಾಲ್ಮಿಕಿ, ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ನಾಲಿಗೆ ಕತ್ತರಿಸಿ, ಮೂಳೆಮುರಿದು ಸುಟ್ಟು ಹಾಕಿರುವುದನ್ನು ಪ್ರತಿಭಟಿಸಿ, ಒರಿಸ್ಸಾದ ಭುವನೇಶ್ವರದಲ್ಲಿ ಹೋರಾಟ ನಡೆಸುತ್ತಿರುವ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ (AIRWO) ಯ ಅಖಿಲ ಭಾರತ ಅಧ್ಯಕ್ಷರಾಗಿರುವ ಪ್ರಮೀಳಾ ಹಾಗೂ ಇನ್ನಿತರ 50ಕ್ಕೂ ಹೆಚ್ಚು ಮಹಿಳೆಯರನ್ನು ಅಲ್ಲಿನ ಸರಕಾರ ಬಂಧಿಸಿರುವುದು ಅತ್ಯಂತ ಖಂಡನೀಯ. ಕೂಡಲೇ ಅವರನ್ನು ಬಿಡುಗಡೆಗೊಳಿಸಲು ಸಿಪಿಐ(ಎಂಎಲ್)ರೆಡ್ ಸ್ಟಾರ್ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತದೆ.
ಮೋದಿ ಮತ್ತು ಯೋಗಿಯಂತ ಬ್ರಾಹ್ಮಣ ಆಡಳಿತ ಪೋಲಿಸ್ ಹಾಗೂ ರಾಜಕೀಯ ನಾಯಕತ್ವದ ಸಹಾಯದಿಂದ ಸವರ್ಣಿಯರು ಆರ್‍ಎಸ್‍ಎಸ್ ನ ನವ ಪ್ಯಾಸಿಸ್ಟ್ ಗೂಂಡಾಗಳಿಂದ ಎಲ್ಲಾ ಪುರಾವೆಗಳನ್ನು ನಾಶಮಾಡಲು ಬಾಲಕಿಯ ದೇಹವನ್ನು ಸುಟ್ಟು ಹಾಕಲಾಗಿದೆ.
ನರ ಪ್ರತಿರೋದವನ್ನು ನಿಗ್ರಹಿಸುತ್ತಿರುವ ನಿಮ್ಮ ಪ್ರತಿರೋದವನ್ನು ಹೆಚ್ಚು ಪ್ರಬಲ ಪ್ರತಿರೋಧಕ್ಕೆ ಕಾರಣವಾಗುತ್ತದೆ. ಎಂದು ನಾವು ಮೋದಿ, ಯೋಗಿ ಆಡಳಿತಕ್ಕೆ ಎಚ್ಚರಿಕೆ ನೀಡುತ್ತೇವೆ ಎಂದು ಸಿಪಿಐ(ಎಂಎಲ್)ರೆಡ್ ಸ್ಟಾರ್ ಕರ್ನಾಟಕ ರಾಜ್ಯ ಸಮಿತಿ ಬಿ. ರುದ್ರಯ್ಯ, ರಾಜ್ಯ ಕಾರ್ಯದರ್ಶಿ, ಸದಸ್ಯರಾದ ಎಂ. ಗಂಗಾಧರ ಅವರು ತಿಳಿಸಿದ್ದಾರೆ.




