ಕೌಟುಂಬಿಕ ಕಲಹ: ಅಣ್ಣನನ್ನೆ ಹತ್ಯೆಗೈದು ಠಾಣೆಗೆ ಬಂದು ಶರಣಾದ ತಮ್ಮ

ಗಂಗಾವತಿ: ಕೌಟುಂಬಿಕ ಕ್ಷುಲ್ಲಕ ಕಾರಣಕ್ಕಾಗಿ ಸ್ವಂತ ಅಣ್ಣನನ್ನೇ ತಮ್ಮ ಕತ್ತು ಸೀಳಿ ಕೊಂದು ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ನಗರದ ಎಚ್.ಆರ್.ಎಸ್.ಕಾಲೋನಿಯಲ್ಲಿ ಆ.3ರ ಮಂಗಳವಾರ ಬೆಳಿಗ್ಗೆ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಮೌಲಾಹುಸೇನ್ ಭಾರಿ (32) ಎಂದು ಗುರುತಿಸಲಾಗಿದ್ದು, ಈತನ ಸಹೋದರ ನೂರ್ ಅಹಮದ್ ಬಾರಿ(26) ಕೊಲೆ ಮಾಡಿದಾತ.

ಕೌಟುಂಬಿಕ ಕಲಹದ ಹಿನ್ನೆಲೆ ಮನೆಯಲ್ಲಿ ಯಾರು ಇಲ್ಲದ ವೇಳೆ ಸ್ವಂತ ಅಣ್ಣನನ್ನು ಕತ್ತು ಸೀಳಿ ಕೊಲೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಮೂಲತಃ ಗಂಗಾವತಿ ಕಿಲ್ಲಾ ಏರಿಯಾದವರಾದ ಇವರು ಇತ್ತೀಚಿಗೆ ಎಚ್.ಆರ್.ಎಸ್ ಕಾಲೋನಿ ಅಖಂಡೇಶ್ವರ ದೇವಾಲದ ಬಳಿ ಮನೆ ಬಾಡಿಗೆ ಪಡೆದು ಜೀವನ ನಡೆಸುತ್ತಿದ್ದರು. ಇಬ್ಬರು ಸಹೋದರರು ಇಬ್ಬರು ಸಹೋದರಿಯರನ್ನು ಮದುವೆಯಾಗಿದ್ದರು.

ಕೊಲೆಯಾದ ಸ್ಥಳಕ್ಕೆ ಡಿವೈಎಸ್ಪಿ ಸಿದ್ದನಗೌಡ ಪಾಟೀಲ್, ಪಿಐ ಅಡಿವೇಶಪ್ಪ ಹಾಗೂ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Latest Indian news

Popular Stories