ಕನಕಗಿರಿ: ಕುರಿ ಹಾಗು ಮನೆ ಕಳ್ಳರ ಬಂಧನ,9 ಲಕ್ಷ ವಶ.

ಕನಕಗಿರಿ:- ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೆಗೆ ಕುರಿ ಕಳ್ಳತನ, ಹಾಗೂ ಮನೆ ಕಳ್ಳತನದಂತಹ ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಮನೆ ಗಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದು, ಬಂಧಿತ ಆರೋಪಿಗಳಿಂದ 9 ಲಕ್ಷ ಮೌಲ್ಯದ ಒಂದು ಬುಲೆರೋ ವಾಹನ, 46 ಸಾವಿರ ರೂ ನಗದು ಹಣ ಹಾಗೂ 8 ಗ್ರಾಂ ಬಂಗಾರದ ಆಭರಣದ ಮೌಲ್ಯ 46 ಸಾವಿರ ರೂ ಸೇರಿದಂತೆ ಒಟ್ಟು 9 ಲಕ್ಷ 92 ಸಾವಿರ ಬೆಲೆ ಬಾಳುವ ವಸ್ತು, ವಾಹನ ಹಾಗೂ ನಗದು ಹಣವನ್ನು ವಶಪಡಿಸಿಕೊಂಡ ಘಟನೆ ಕನಕಗಿರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಬಂಧಿತ ಆರೋಪಿಗಳನ್ನು ಅಮರೇಶ್ ಮೊಡಿಕಾರ, ಶಿವು ಮೊಡಿಕಾರ, ಎಂದು ಗುರುತಿಸಲಾಗಿದ್ದು ಮಂಗಳವಾರದಂದು ಕಾರಟಗಿ ರಸ್ತೆಯ ನವಲಿ ಗ್ರಾಮದ ಹತ್ತಿರ ಅತೀ ವೇಗವಾಗಿ ಬರುತ್ತಿರುವ ವಾಹನವನ್ನು ತಡೆದು ನಿಲ್ಲಿಸಿದಾಗ ಅನುಮಾನಸ್ಪದವಾಗಿ ಕಂಡ ಹಿನ್ನೆಲೆಯಲ್ಲಿ ಅವರನ್ನು ಠಾಣೆಗೆ ಕರೆತಂದು ವಿಚಾರಿಸಲಾಗಿ, ಕನಕಗಿರಿ, ನವಲಿ, ಚಿರಚನಗುಡ್ಡ ಗ್ರಾಮಗಳಲ್ಲಿ ಮನೆ ಕಳ್ಳತನ, ಕುರಿ ಕಳ್ಳತನ, ಬಾರ್ ಶಾಪ್ ಕಳ್ಳತನ ಸೇರಿದಂತೆ ಕಾರಟಗಿ, ಬೇವೂರು, ಲಿಂಗಸಗೂರ, ತಾವರಗೇರಾ ಠಾಣಾ ವ್ಯಾಪ್ತಿಯ ಹಲವಾರು ಕಳ್ಳತನ ದಲ್ಲಿ ಭಾಗಿ ಯಾಗಿದ್ದ ಬಗ್ಗೆ ತಿಳಿದು ಬಂದಿದ್ದು, ಇವರ ಜೊತೆ ಇನ್ನು 3 ಜನ ಆರೋಪಿತರು ತಲೆ ಮರೆಸಿಕೊಂಡಿದ್ದಾರೆ, ಈ ಕುರಿತಂತೆ ಜಿಲ್ಲಾ ಪೊಲೀಸ್ ಅಧೀಕ್ಷರಾದ ಯಶೋಧಾ ಒಂಟಗೋಡಿ, ಹಾಗೂ ಗಂಗಾವತಿ ಡಿವಾಯ್ ಎಸ್ ಪಿ ಆರ್ ಎಸ್ ಉಜ್ಜನಕೊಪ್ಪ ನೇತೃತ್ವದಲ್ಲಿ ಕನಕಗಿರಿ ಪಿಎಸ್ಐ ಸೇರಿದಂತೆ ಸಿಬ್ಬಂದಿಗಳು ಸೇರಿ, ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಸಿಬ್ಬಂದಿ ಯವರಿಗೆ, ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತ ಪಡಿಸಿ, ಬಹುಮಾನ ಘೋಷಿಸಿದ್ದಾರೆ.

Latest Indian news

Popular Stories