
ರಾಯಚೂರು: ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾಡಳಿತ ಭವನದ ಸ್ಥಳಕ್ಕೆ ಡಿಸಿ ಭೇಟಿ- ಪರಿಶೀಲನೆ
ರಾಯಚೂರು, ನ. 20:- ನಗರದ ಹೊರವಲಯ ಯಕ್ಲಾಸಪೂರ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾಡಳಿತ ಭವನದ ಕಾಮಗಾರಿಗಳ ಪ್ರಗತಿಯನ್ನು ವೀಕ್ಷಿಸಲು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ನ.20ರ ಶುಕ್ರವಾರದಂದು ಕರ್ನಾಟಕ ಗೃಹ ನಿರ್ಮಾಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ಮೊದಲಿಗೆ ನೂತನ ಜಿಲ್ಲಾಡಳಿತ ಭವನ ನಿರ್ಮಾಣದ ಕಾಮಗಾರಿಗಳು ಹಾಗೂ ಸಂಪೂರ್ಣ ಪ್ರದೇಶವನ್ನು ವೀಕ್ಷಿಸಿದ ಜಿಲ್ಲಾಧಿಕಾರಿಯವರು ಜಿಲ್ಲಾಡಳಿತ ಭವನ ವ್ಯಾಪ್ತಿಗೆ ಒಳಪಡುವ ಪ್ರದೇಶದ ಗಡಿ ಗುರುತಿಸಿ, ಅಲ್ಲಿ ಗುರುತಿನ ಕಲ್ಲುಗಳನ್ನು ಹಾಕಬೇಕು, ವಾಹನಗಳ ನಿಲುಗಡೆ ಪ್ರದೇಶ, ವಿದ್ಯುನ್ಮಾನ ಮತ ಯಂತ್ರಗಳ ಶೇಖರಣಾ ಕೊಠಡಿ ಹಾಗೂ ರಸ್ತೆಗಳನ್ನು ನಿರ್ಮಿಸಬೇಕಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ತಹಶೀಲ್ದಾರ್ ಡಾ. ಹಂಪಣ್ಣ ಸಜ್ಜನ್, ಕರ್ನಾಟಕ ವಸತಿ ಗೃಹಗಳ ಕಾರ್ಯನಿರ್ವಹಕ ಇಂಜನೀಯರ್ ಲಕ್ಷ್ಮೀನಾರಾಯಣ ಸ್ವಾಮಿ, ಸಹಾಯಕ ಕಾರ್ಯ ಪಾಲಕ ಅಭಿಯಂತರ ಶಿವಶಂಕರ, ಕಿರಿಯ ಅಭಿಯಂತರ ತನುಜೇಂದ್ರ ಪಾಟೀಲ್, ಕಟ್ಟಡದ ವಾಸ್ತು ಶಿಲ್ಪಿ ಪ್ರೇಮಲತಾ, ಗುತ್ತೆಗೆದಾರ ಪ್ರಮೋದ್, ನಗರಾಭಿವೃದ್ಧಿ ಪಾಧಿಕಾರದ ಆಯುಕ್ತ ಶರಣಪ್ಪ ಸೇರಿದಂತೆ ಕಂದಾಯ ಹಾಗೂ ಇತರೆ ಇಲಾಖೆಯ ಅಧಿಕಾರಿಗಳಿದ್ದರು.




