
Crime
ದೊಡ್ಡಬಳ್ಳಾಪುರ :ಹಸುಗಳನ್ನು ತೊಳೆಯಲು ಕೆರೆಗೆ ಇಳಿದ ರೈತ ಕಾಲು ಜಾರಿ ನೀರು ಪಾಲು
ದೋಡ್ದಬಳ್ಳಾಪುರ:ರೈತನೊಬ್ಬ ಹಸುಗಳನ್ನು ತೊಳೆಯಲೆಂದು ಕೆರೆಗೆ ಇಳಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದ ಪರಿಣಾಮ ನೀರು ಪಲಾಗಿದ್ದಾನೆ.
ರಾಂಪುರ ಗ್ರಾಮದ ನಿವಾಸಿ ಕುಮಾರ್ (43) ಮೃತ ದುರ್ದೈವಿ. ಹಸುಗಳ ಮೈತೊಳೆಯಲೆಂದು ಆರು ಹಸುಗಳೊಂದಿಗೆ ಕೆರೆಗೆ ಹೋಗಿದ್ದ ರೈತ ಕುಮಾರ್, ಹಸುಗಳ ಮೈತೊಳೆಸಿ ಕಳುಹಿಸಿದ್ದಾನೆ.
ಹಸುಗಳು ವಾಪಸ್ ಆದರೂ ರೈತ ಮನೆಗೆ ಬಂದಿಲ್ಲ.
ಇದರಿಂದ ಅನುಮಾನಗೊಂಡ ಕುಟುಂಬದವರು ಕೆರೆ ಬಳಿ ಹೋಗಿ ನೋಡಿದ್ದಾರೆ. ಕೆರೆ ಬಳಿ ಚಪ್ಪಲಿ, ಕೋಲು ಬಿದ್ದಿರುವುದನ್ನು ಗಮನಸಿದ್ದಾರೆ. ತಕ್ಷಣ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.




