Crime

ಬೀಚ್ ಗೆ ತೆರಳಿದ್ದ ವಿದ್ಯಾರ್ಥಿನಿ ನೀರಲ್ಲಿ ಮುಳುಗಿ ಮೃತ್ಯು

ಮಂಗಳೂರು:ನೀರಿನಲ್ಲಿ ಈಜಲು ಬೀಚ್ ಗೆ ತೆರಳಿದ್ದ ಆರು ಮಂದಿಯಲ್ಲಿ ಓರ್ವ ವಿದ್ಯಾರ್ಥಿನಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳೂರಿನ ಸುರತ್ಕಲ್ ಸಮೀಪದ ಚಿತ್ರಾಪುರ ಬೀಚ್ ನಲ್ಲಿ ನಡೆದಿದೆ.

ನಿಶಾ (15)ಮೃತಪಟ್ಟಿ ವಿದ್ಯಾರ್ಥಿನಿ.ನಿಶಾ ತನ್ನ ಸ್ನೇಹಿತರೊಂದಿಗೆ ಚಿತ್ರಾಪುರ ಬೀಚ್ ಗೆ ಬಂದಿದ್ದಳು. ನಿಶಾಳೊಂದಿಗೆ ವಿಟ್ಲದ ದಿಗಂತ (15), ದಿವ್ಯರಾಜ್ (15), ತೇಜಸ್ (14), ಕೀರ್ತನ್ (16), ಅಶ್ಮಿತಾ (15) ಇವರೆಲ್ಲರೂ ನೀರಿನಲ್ಲಿ ಈಜುತ್ತಿದ್ದರು. ದೊಡ್ಡ ಅಲೆ ಬಂದ ಪರಿಣಾಮ ಮಕ್ಕಳು ಕೊಚ್ಚಿಕೊಂಡು ಹೋಗಿದ್ದಾರೆ.ಕೂಡಲೇ ಇದನ್ನು ಗಮನಿಸಿದ ಹತ್ತಿರದ ಮೀನುಗಾರರು ಮತ್ತು ಸ್ಥಳೀಯರು ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ.ಇವರಲ್ಲಿ ದಿಗಂತ್, ಕೀರ್ತನ್, ಅಶ್ಮಿತಾ, ದಿವ್ಯರಾಜ್ ಆರೋಗ್ಯವಾಗಿದ್ದು, ತೇಜಸ್ ನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button